ಇಂಡೋನೇಶಿಯಾ ಓಪನ್ ಫೈನಲಿಗೇರಿದ ಪಿ.ವಿ.ಸಿಂಧು

ಇಂಡೋನೇಶಿಯಾ ಓಪನ್ ಫೈನಲಿಗೇರಿದ ಪಿ.ವಿ.ಸಿಂಧು

HSA   ¦    Jul 20, 2019 05:48:16 PM (IST)
ಇಂಡೋನೇಶಿಯಾ ಓಪನ್ ಫೈನಲಿಗೇರಿದ ಪಿ.ವಿ.ಸಿಂಧು

ಜಕಾರ್ತ: ಚೀನಾದ ಚೆನ್ ಯು ಫೆಯಿ ವಿರುದ್ಧ ಗೆಲುವು ದಾಖಲಿಸಿಕೊಂಡ ಭಾರತದ ಪಿವಿ ಸಿಂಧು ಅವರು ಇಂಡೋನೇಶಿಯಾ ಓಪನ್ ನ ಫೈನಲಿಗೇರಿದ್ದಾರೆ.

ನಾಳೆ ನಡೆಯಲಿರುವ ಫೈನಲಿನಲ್ಲಿ ಸಿಂಧು ಜಪಾನ್ ನ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಅಕನೆ ಯಮಗುಚಿ ವಿರುದ್ಧ ಆಡಲಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಮೊದಲ ಸಲ ಸೂಪರ್ 1000 ಪ್ರಶಸ್ತಿಗಾಗಿ ಆಡುತ್ತಲಿದ್ದಾರೆ.

ಜಪಾನ್ ನ ಮೂರನೇ ಶ್ರೇಯಾಂಕಿತ ಆಟಗಾರ್ತಿ ನೊಜೊಮಿ ಒಕುಹಾರ ವಿರುದ್ಧ 21-14, 21-7ರಿಂದ ಗೆಲುವು ದಾಖಲಿಸಿಕೊಂಡಿದ್ದ ಸಿಂಧು ಸೆಮಿಫೈನಲಿಗೆ ತಲುಪಿದ್ದರು.

ಸೆಮಿಫೈನಲಿನಲ್ಲಿ 46 ನಿಮಿಷಗಳ ಹೋರಾಟದಲ್ಲಿ ಸಿಂಧು 21-19, 21-10ರಿಂದ ಚೀನಾದ ಆಟಗಾರ್ತಿಯನ್ನು ಪರಾಭವಗೊಳಿಸಿದರು.