ತನ್ನ ಹೇಳಿಕೆಗೆ ಕ್ಷಮೆ ಕೋರಿ ಹಾರ್ದಿಕ್ ಪಾಂಡ್ಯ

ತನ್ನ ಹೇಳಿಕೆಗೆ ಕ್ಷಮೆ ಕೋರಿ ಹಾರ್ದಿಕ್ ಪಾಂಡ್ಯ

HSA   ¦    Jan 09, 2019 10:35:45 AM (IST)
ತನ್ನ ಹೇಳಿಕೆಗೆ ಕ್ಷಮೆ ಕೋರಿ ಹಾರ್ದಿಕ್ ಪಾಂಡ್ಯ

ಸಿಡ್ನಿ: ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಾನು ನೀಡಿದ್ದ `ಮಿಸೋಜಿನಿಸ್ಟ್' ಮತ್ತು' ಸೆಕ್ಸಿಸ್ಟ್ ' ಎಂಬ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.

ತಾನು ಕಾರ್ಯಕ್ರಮದಲ್ಲಿ ಕಳೆದುಹೋಗಿದ್ದೆ. ಆದರೆ ಯಾವ ಭಾವನೆಗಳಿಗೂ ಧಕ್ಕೆ ತರುವಂತಹ ಉದ್ದೇಶವು ನನಗೆ ಇರಲಿಲ್ಲ ಎಂದು ಪಾಂಡ್ಯ ಹೇಳಿದ್ದಾರೆ.

ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ನನ್ನ ಹೇಳಿಕೆಯಿಂದ ಯಾರಿಗಾದರೂ ಯಾವುದೇ ರೀತಿಯಿಂದಲೂ ನೋವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ. ನಾನು ಕಾರ್ಯಕ್ರಮದಲ್ಲಿ ಸ್ವಲ್ಪ ಮುಳುಗಿ ಹೋಗಿದ್ದೆ. ನನಗೆ ಯಾರಿಗೂ ನೋವುಂಟು ಮಾಡುವ ಅಥವಾ ಅವಮಾನಿಸುವ ಉದ್ದೇಶವಿರಲಿಲ್ಲ ಎಂದು ಪಾಂಡ್ಯ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.