ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದ ಕುಲದೀಪ್ ಯಾದವ್

ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದ ಕುಲದೀಪ್ ಯಾದವ್

HSA   ¦    Feb 11, 2019 03:20:07 PM (IST)
ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದ ಕುಲದೀಪ್ ಯಾದವ್

ದುಬೈ: ಟೀಂ ಇಂಡಿಯಾದ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪುರುಷರ ಟಿ-20 ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಎರಡು ವಿಕೆಟ್ ಉರುಳಿಸಿದ ಕುಲದೀಪ್ ಜೀವನಶ್ರೇಷ್ಠ ಎರಡನೇ ಸ್ಥಾನ ಪಡೆದಿದ್ದಾರೆ.

ಟಿ-20 ಸರಣಿಯಲ್ಲಿ ಭಾರತವು 1-2ರಿಂದ ಸರಣಿ ಸೋಲುಂಡಿತ್ತು. ಸರಣಿಯಲ್ಲಿ ಏಕೈಕ ಪಂದ್ಯವನ್ನು ಆಡಿದ ಕುಲದೀಪ್ ಟಿಮ್ ಸೈರ್ಪೆಟ್ ಮತ್ತು ಕಾಲಿನ್ ಮುನ್ರೊ ವಿಕೆಟ್ ಉರುಳಿಸಿದ್ದರು.

ಕೃನಾಲ್ ಪಾಂಡ್ಯ ಇದೇ ವಿಭಾಗದಲ್ಲಿ 58ನೇ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಏಳನೇ ಮತ್ತು ಶಿಖರ್ ಧವನ್ 11ನೇ ಸ್ಥಾನ ಪಡೆದಿದ್ದಾರೆ.