ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಕೋಚ್ ಆಯ್ಕೆ

ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಕೋಚ್ ಆಯ್ಕೆ

Jun 17, 2017 02:28:31 PM (IST)

ಬೆಂಗಳೂರು: ಜೊರಾನ್ ವಿಜಿಕ್ ಅವರನ್ನು ಭಾರತ ಮಹಿಳಾ ಬ್ಯಾಸ್ಕೆಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಬ್ಯಾಸ್ಕೆಟ್ಬಾಲ್ ಫೆಡರೇಷನ್ ನೇಮಕ ಮಾಡಿದ್ದಾರೆ. ಜುಲೈ 23ರಂದು ಆರಂಭವಾಗಲಿರುವ ಮಹಿಳೆಯರ ಏಷ್ಯಾ ಕಪ್ ಚಾಂಪಿಯನ್ಷಿಪ್ಗೆ ತಂಡವನ್ನು ಸಜ್ಜುಗೊಳಿಸುವ ಹೊಣೆ ಜೊರಾನ್  ಹೆಗಲಿಗೇರಿದೆ.

ಬೆಂಗಳೂರಿನಲ್ಲಿ ಆಯ್ಕೆಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾರತ ತಂಡವು ಏಷ್ಯಾ ಕಪ್ ಚಾಂಪಿಯನ್ಷಿಪ್ನ ಫೈನಲ್ ತಲುಪುವುದು ಖಚಿತ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಂಡಕ್ಕೆ ಲೆಬನಾನ್ ಸವಾಲು ಎದುರಾಗುವ ಸಾಧ್ಯತೆ ಇದೆ.   ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿರುವ ಭಾರತ ಲೀಗ್ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಉಜ್ಬೆಕಿಸ್ತಾನವನ್ನು ಮಣಿಸಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.