ಕ್ಯಾಪ್ಟನ್ ಕೂಲ್ ಧೋನಿಗೆ ಪಂದ್ಯ ಶುಲ್ಕದ 50ರಷ್ಟು ದಂಡ

ಕ್ಯಾಪ್ಟನ್ ಕೂಲ್ ಧೋನಿಗೆ ಪಂದ್ಯ ಶುಲ್ಕದ 50ರಷ್ಟು ದಂಡ

HSA   ¦    Apr 12, 2019 01:59:19 PM (IST)
ಕ್ಯಾಪ್ಟನ್ ಕೂಲ್ ಧೋನಿಗೆ ಪಂದ್ಯ ಶುಲ್ಕದ 50ರಷ್ಟು ದಂಡ

ಜೈಪುರ: ಕ್ಯಾಪ್ಟನ್ ಕೂಲ್ ಎಂದು ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಅಂಪಾಯರ್ ಗಳೊಂದಿಗೆ ವಾಗ್ವಾದ ನಡೆಸಿರುವುದಕ್ಕೆ ಪಂದ್ಯಶುಲ್ಕದ ಅರ್ಧದಷ್ಟು ದಂಡ ಹೇರಲಾಗಿದೆ.

ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಅಂತಿಮ ಓವರ್ ನಲ್ಲಿ ನೋ ಬಾಲ್ ಕೊಡದೆ ಇದ್ದ ಅಂಪಾಯರ್ ಗಳ ಜತೆಗೆ ಧೋನಿ ಮೈದಾನಕ್ಕಿಳಿದು ವಾಗ್ವಾದ ನಡೆಸಿದರು.

ಇಂಡಿಯನ್ ಪ್ರಿಮಿಯರ್ ಲೀಗ್ ನ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಧೋನಿ ಅವರಿಗೆ ದಂಡ ಹೇರಲಾಗಿದೆ ಎಂದು ಐಪಿಎಲ್ ನ ಪ್ರಕಟನೆಯು ತಿಳಿಸಿದೆ.