ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಸರ್ದಾರ್ ಸಿಂಗ್

ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಸರ್ದಾರ್ ಸಿಂಗ್

HSA   ¦    Sep 12, 2018 06:29:33 PM (IST)
ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಸರ್ದಾರ್ ಸಿಂಗ್

ನವದೆಹಲಿ: ಭಾರತ ಹಾಕಿ ತಂಡದ ಮಾಜಿ ಕಪ್ತಾನ ಸರ್ದಾರ್ ಸಿಂಗ್ ಅವರು ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ.

ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಸರ್ದಾರ್ ಸಿಂಗ್ ಅವರು, ಕಳೆದ 12 ವರ್ಷಗಳಿಂದ ಸಾಕಷ್ಟು ಹಾಕಿ ಆಡಿದ್ದೇನೆ ಎಂದು ತಿಳಿಸಿದರು.

ಏಶ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ಉಳಿಸಿಕೊಳ್ಳಲು ವಿಫಲವಾಗಿ, ಕಂಚಿಗೆ ತೃಪ್ತಿ ಪಟ್ಟುಕೊಂಡು ಹಾಕಿ ತಂಡದ ಪ್ರದರ್ಶನದಿಂದ ನಿರಾಶೆಗೊಂಡು ಸರ್ದಾರ್ ಸಿಂಗ್ ಅವರು ನಿವೃತ್ತಿ ಘೋಷಿಸಿದ್ದಾರೆ.

ಹೌದು, ನಾನು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಕಳೆದ 12 ವರ್ಷಗಳಲ್ಲಿ ನಾನು ತುಂಬಾ ಹಾಕಿ ಆಡಿದ್ದೇನೆ. ಯುವ ಆಟಗಾರರು ಇನ್ನು ಅವಕಾಶ ಪಡೆದುಕೊಳ್ಳಬೇಕು ಎಂದು ಹೇಳಿದರು.

ಚಂಡೀಗಡದಲ್ಲಿ ನನ್ನ ಕುಟುಂಬ, ಹಾಕಿ ಇಂಡಿಯಾ ಮತ್ತು ನನ್ನ ಸ್ನೇಹಿತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಹಾಕಿ ಹೊರತಾದ ಜೀವನದ ಬಗ್ಗೆ ಚಿಂತಿಸಲು ಇದು ಸಕಾಲವೆಂದು ನನ್ನ ಅನಿಸಿಕೆ ಎಂದು ಸರ್ದಾರ್ ಸಿಂಗ್ ತಿಳಿಸಿದರು.