ಸೋಲಿನ ಬಳಿಕ ನೆಟ್ ನಲ್ಲಿ ಬೆವರಿಳಿಸಿದ ಅಜಿಂಕ್ಯ ರಹಾನೆ

ಸೋಲಿನ ಬಳಿಕ ನೆಟ್ ನಲ್ಲಿ ಬೆವರಿಳಿಸಿದ ಅಜಿಂಕ್ಯ ರಹಾನೆ

HSA   ¦    Jan 10, 2018 02:24:14 PM (IST)
ಸೋಲಿನ ಬಳಿಕ ನೆಟ್ ನಲ್ಲಿ ಬೆವರಿಳಿಸಿದ ಅಜಿಂಕ್ಯ ರಹಾನೆ

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಗೆ ತಂಡದ ಆಯ್ಕೆ ಬಗ್ಗೆ ತುಂಬಾ ಟೀಕೆ ವ್ಯಕ್ತವಾಗಿತ್ತು. ಅಜಿಂಕ್ಯ ರಹಾನೆ ಅವರನ್ನು ಕೈಬಿಟ್ಟಿರುವುದೇ ಸೋಲಿಗೆ ಕಾರಣವೆಂದು ಕೆಲವರು ದೂರಿದ್ದರು.

ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಬದಲು ಅಜಿಂಕ್ಯ ರಹಾನೆ ಆಯ್ಕೆ ಮಾಡಿದ್ದರೆ ಭಾರತ 72 ರನ್ ಗಳಿಂದ ಸೋಲುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆಂದು ಕೆಲವು ಮಾಜಿ ಕ್ರಿಕೆಟಿಗರು ಕೂಡ ಅಭಿಪ್ರಾಯಪಟ್ಟಿದ್ದರು.

ಆದರೆ ಸೋಲಿನ ಬಳಿಕ ರಹಾನೆ, ಆರಂಭಿಕ ಕೆಎಲ್ ರಾಹುಲ್, ವೇಗಿ ಇಶಾಂತ್ ಶರ್ಮಾ ಮತ್ತು ಪಾರ್ಥಿವ್ ಪಟೇಲ್ ನೆಟ್ ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿರುವುದು ಕಂಡುಬಂತು.

ಸುಮಾರು ಒಂದುವರೆ ಗಂಟೆಕಾಲ ನಡೆದ ಅಭ್ಯಾಸದಲ್ಲಿ ಸಹಾಯಕ ಕೋಚ್ ಸಂಜಯ್ ಬಂಗಾರ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಜತೆಗಿದ್ದರು.

ಮುಂದಿನ ಪಂದ್ಯದಲ್ಲಿ ಈ ಮೂರು ಮಂದಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.