ಯುವ ಒಲಿಂಪಿಕ್ಸ್: ಭಾರತಕ್ಕೆ ಸ್ವರ್ಣ ಗೆದ್ದುಕೊಟ್ಟ ವೆಯ್ಟ್ ಲಿಫ್ಟರ್ ಲ್ಯಾರಿನ್ನುಂಗ

ಯುವ ಒಲಿಂಪಿಕ್ಸ್: ಭಾರತಕ್ಕೆ ಸ್ವರ್ಣ ಗೆದ್ದುಕೊಟ್ಟ ವೆಯ್ಟ್ ಲಿಫ್ಟರ್ ಲ್ಯಾರಿನ್ನುಂಗ

HSA   ¦    Oct 09, 2018 12:03:02 PM (IST)
ಯುವ ಒಲಿಂಪಿಕ್ಸ್: ಭಾರತಕ್ಕೆ ಸ್ವರ್ಣ ಗೆದ್ದುಕೊಟ್ಟ ವೆಯ್ಟ್ ಲಿಫ್ಟರ್ ಲ್ಯಾರಿನ್ನುಂಗ

ಬ್ಯೂನಸ್ ಐರಿಸ್(ಅರ್ಜೆಂಟೀನಾ): ಇಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ನಲ್ಲಿ ವೆಯ್ಟ್ ಲಿಫ್ಟರ್ ಜೆರೆಮಿ ಲ್ಯಾರಿನ್ನುಂಗ ಅವರು ಮಂಗಳವಾರ ಭಾರತಕ್ಕೆ ಸ್ವರ್ಣ ಪದಕ ಗೆಲ್ಲಿಸಿಕೊಟ್ಟಿದ್ದಾರೆ.

ಪುರುಷರ ವಿಭಾಗದ 62 ಕೆಜಿ ವಿಭಾಗದಲ್ಲಿ ಒಟ್ಟು 272 ಕೆಜಿ ಭಾರ ಎತ್ತುವ ಮೂಲಕ ಸ್ವರ್ಣ ಪದಕವನ್ನು ಕೊರಳಿಗೆ ಹಾಕಿಕೊಂಡರು. ಟರ್ಕಿಯ ತೋಪಟಾಸ್ ಕಾನೇರ್ ಷವರ್ ಬೆಳ್ಳಿ ಮತ್ತು ಕೊಲಂಬಿಯಾದ ಜೋಸ್ ಮಂಜಾರಿಸ್ ಕಂಚು ಗೆದ್ದುಕೊಂಡರು.

ತುಷಾರ್ ಮಾನೆ, ಮೆಹೂಲಿ ಘೋಷ್ ಮತ್ತು ತಬಾಬಿ ದೇವಿ ಅವರು ವಿವಿಧ ವಿಭಾಗದಲ್ಲಿ ಮೂರು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. 2014ರಲ್ಲಿ ಎರಡು ಪದಕ ಗೆದ್ದಿತ್ತು. ಈ ಸಲ ಒಂದು ಚಿನ್ನ ಮತ್ತು ಮೂರು ಬೆಳ್ಳಿ ಗೆದ್ದಿದೆ.