ಧವನ್ ಭರ್ಜರಿ ಆಟ: ಅಗ್ರಸ್ಥಾನಕ್ಕೇರಿದ ಹೈದರಾಬಾದ್

ಧವನ್ ಭರ್ಜರಿ ಆಟ: ಅಗ್ರಸ್ಥಾನಕ್ಕೇರಿದ ಹೈದರಾಬಾದ್

HSA   ¦    May 11, 2018 11:21:12 AM (IST)
ಧವನ್ ಭರ್ಜರಿ ಆಟ: ಅಗ್ರಸ್ಥಾನಕ್ಕೇರಿದ ಹೈದರಾಬಾದ್

ಹೈದರಾಬಾದ್: ಶಿಖರ್ ಧವನ್ ಮಹತ್ವದ ಸಮಯದಲ್ಲಿ ಫಾರ್ಮ್ ಗೆ ಬಂದು ಹೈದರಾಬಾದ್ ಸನ್ ರೈಸರ್ಸ್ ಗೆ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ದೊರಕಿಸಿಕೊಟ್ಟಿದ್ದಾರೆ.

ಧವನ್ 50 ಎಸೆತಗಳಲ್ಲಿ 92 ರನ್ ಮತ್ತು ಕೇನ್ ವಿಲಿಯಮ್ಸನ್ 53 ಎಸೆತಗಳಲ್ಲಿ 83 ರನ್ ಬಾರಿಸಿ ಮುರಿಯದ ಎರಡನೇ ವಿಕೆಟಿಗೆ 176 ರನ್ ಪೇರಿಸಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಂತೆ ಮಾಡಿದರು.

188 ರನ್ ಗಳ ಗೆಲುವಿನ ಗುರಿ ಪಡೆದಿದ್ದ ಹೈದರಾಬಾದ್ 18.5 ಓವರ್ ಗಳಲ್ಲಿ ಗೆಲುವು ದಾಖಲಿಸಿಕೊಂಡಿತು. 11 ಪಂದ್ಯಗಳಲ್ಲಿ ಎಸ್ ಆರ್ ಎಚ್ ಒಟ್ಟು 9 ಪಂದ್ಯ ಗೆದ್ದುಕೊಂಡಿದೆ.

ಇದಕ್ಕೆ ಮೊದಲು ಹೈದರಾಬಾದ್ ಬೌಲರ್ ಗಳನ್ನು ಚೆಂಡಾಡಿದ ಯುವ ಆಟಗಾರ ರಿಷಬ್ ಪಂತ್ 63 ಎಸೆಗಳಲ್ಲಿ 128 ರನ್ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ನೆರವಾದರು. ಪಂತ್ 15 ಬೌಂಡರಿ ಮತ್ತು 7 ಸಿಕ್ಸರ್ ಸಿಡಿಸಿದರು.