ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಫೇವರಿಟ್: ಅಜಿಂಕ್ಯ ರಹಾನೆ

ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಫೇವರಿಟ್: ಅಜಿಂಕ್ಯ ರಹಾನೆ

HSA   ¦    Dec 04, 2018 05:15:55 PM (IST)
ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಫೇವರಿಟ್: ಅಜಿಂಕ್ಯ ರಹಾನೆ

ಅಡಿಲೇಡ್: ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಫೇವರಿಟ್ ಆಗಿದೆ ಎಂದು ಭಾರತದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲಬೇಕಿದ್ದರೆ ಭಾರತ ತಂಡದ ಆಟಗಾರರು ದೊಡ್ಡ ಜತೆಯಾಟವನ್ನು ನಡೆಸಬೇಕು. ಪ್ರತಿಯೊಬ್ಬ ಬ್ಯಾಟ್ಸ್ ಮೆನ್ ನ ಪಾತ್ರವು ತಂಡಕ್ಕೆ ಮಹತ್ವದ್ದಾಗಿದೆ. ಹೀಗಾಗಿ ದೊಡ್ಡ ಜತೆಯಾಟ ಪ್ರಮುಖ ಪಾತ್ರ ವಹಿಸಲಿದೆ ಎಂದು ರಹಾನೆ ಹೇಳಿದರು.

2014-15ರ ಪ್ರವಾಸದಲ್ಲಿ ರಹಾನೆ ಮತ್ತು ವಿರಾಟ್ ಕೊಹ್ಲಿ ಮೆಲ್ಬೊರ್ನ್ ಟೆಸ್ಟ್ ನಲ್ಲಿ 262 ರನ್ ಗಳ ಜತೆಯಾಟ ನಡೆಸಿದ್ದರು.

ಕಳೆದ ಸಲ ನಾವಿಬ್ಬರು ಎಂಸಿಜಿಯಲ್ಲಿ ದೊಡ್ಡ ಜತೆಯಾಟ ನಡೆಸಿದ್ದೆವು. ಇದನ್ನು ನಾವಿಬ್ಬರು ಆನಂದಿಸಿದ್ದೆವು. ವೇಗಿ ಮಿಚೆಲ್ ಜಾನ್ಸನ್ ವಿರುದ್ಧ ನಾವಿಬ್ಬರು ಅತ್ಯುತ್ತಮ ಆಟವಾಡಿದ್ದೆವು. ಕೊಹ್ಲಿ ಆಸೀಸ್ ವೇಗಿಗಳನ್ನು ಸರಿಯಾಗಿ ದಂಡಿಸಿದ್ದರು ಎಂದು ರಹಾನೆ ತಿಳಿಸಿದ್ದಾರೆ.