ಟೀಂ ಇಂಡಿಯಾದ ಮೂವರು ಆಟಗಾರರು ಗಾಯಾಳು

ಟೀಂ ಇಂಡಿಯಾದ ಮೂವರು ಆಟಗಾರರು ಗಾಯಾಳು

HSA   ¦    Sep 20, 2018 06:24:35 PM (IST)
ಟೀಂ ಇಂಡಿಯಾದ ಮೂವರು ಆಟಗಾರರು ಗಾಯಾಳು

ದುಬೈ: ಟೀಂ ಇಂಡಿಯಾದ ಆಟಗಾರರಾಗಿರುವ ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ ಮತ್ತು ಶ್ರಾದುಲ್ ಠಾಕೂರ್ ಗಾಯಾಗಳುವಾಗಿ ಏಶ್ಯಾಕಪ್ ಟೂರ್ನಿಯಿಂದ ಹೊರನಡೆದಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಪಾಂಡ್ಯ ಬೆನ್ನುನೋವಿಗೊಳಗಾಗಿದ್ದಾರೆ. ಅವರನ್ನು ಸ್ಟ್ರೆಚರ್ ನಲ್ಲಿ ಮೈದಾನದಿಂದ ಹೊರಗಡೆ ಕೊಂಡೊಯ್ಯಲಾಯಿತು.

ಅಕ್ಸರ್ ಪಟೇಲ್ ಫೀಲ್ಡಿಂಗ್ ಮಾಡುವ ವೇಳೆ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಶ್ರಾದುಲ್ ಠಾಕೂರ ಕೂಡ ಗಾಯಗೊಂಡು ಹೊರನಡೆದಿದ್ದಾರೆ. ಪಾಂಡ್ಯ ಬದಲಿಗೆ ದೀಪಕ್ ಚಾಹರ್ ತಂಡಕ್ಕೆ ಆಯ್ಕೆಯಾದರೆ, ಅಕ್ಸರ್ ಪಟೇಲ್ ಬದಲಿಗೆ ರವೀಂದ್ರ ಜಡೇಜಾ ಮತ್ತು ಶ್ರಾದುಲ್ ಬದಲಿಗೆ ಸಿದ್ಧಾರ್ಥ್ ಕೌಲ್ ತಂಡ ಸೇರಿಕೊಂಡಿದ್ದಾರೆ.