ಎಬಿಡಿ ಅಬ್ಬರಕ್ಕೆ ಡೆಲ್ಲಿ ಪುಡಿಪುಡಿ

ಎಬಿಡಿ ಅಬ್ಬರಕ್ಕೆ ಡೆಲ್ಲಿ ಪುಡಿಪುಡಿ

HSA   ¦    Apr 22, 2018 10:16:02 AM (IST)
ಎಬಿಡಿ ಅಬ್ಬರಕ್ಕೆ ಡೆಲ್ಲಿ ಪುಡಿಪುಡಿ

ಬೆಂಗಳೂರು: ಎಬಿ ಡಿವಿಲಿಯರ್ಸ್ ಅಬ್ಬರ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ ಗೆಲುವು ದಾಖಲಿಸಿಕೊಂಡಿದೆ.

175 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ಆರ್ ಸಿಬಿ ಒಂದು ಹಂತದಲ್ಲಿ 29 ರನ್ ಗಳಿಗೆ ಎರಡು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿಲಿಯರ್ಸ್ ಕೇವಲ 39 ಎಸೆತಗಳಲ್ಲಿ 90 ರನ್ ಬಾರಿಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.

ಕೊಹ್ಲಿ ಮತ್ತು ವಿಲಿಯರ್ಸ್ ಮೂರನೇ ವಿಕೆಟಿಗೆ 63 ರನ್ ಜತೆಗೂಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ವಿಲಿಯರ್ಸ್ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಮತ್ತು ಐದು ಸಿಕ್ಸರ್ ಗಳಿದ್ದವು.

ಇದಕ್ಕೂ ಮೊದಲು ರಿಷಬ್ ಪಂತ್ ಮತ್ತು ಶ್ರೇಯಸ್ ಐಯ್ಯರ್ ಡೆಲ್ಲಿ ಹೋರಾಟಕಾರಿ ಮೊತ್ತ ಪೇರಿಸಲು ನೆರವಾದರು. ಪಂತ್ 48 ಎಸೆತಗಳಲ್ಲಿ 85 ರನ್ ಬಾರಿಸಿದರು.