ವೇಗಿ ಭುವನೇಶ್ವರ್ ಕುಮಾರ್ ಮುಂದಿನೆರಡು ಪಂದ್ಯಗಳಿಗೆ ಅಲಭ್ಯ

ವೇಗಿ ಭುವನೇಶ್ವರ್ ಕುಮಾರ್ ಮುಂದಿನೆರಡು ಪಂದ್ಯಗಳಿಗೆ ಅಲಭ್ಯ

HSA   ¦    Jun 17, 2019 04:01:18 PM (IST)
ವೇಗಿ ಭುವನೇಶ್ವರ್ ಕುಮಾರ್ ಮುಂದಿನೆರಡು ಪಂದ್ಯಗಳಿಗೆ ಅಲಭ್ಯ

ಮ್ಯಾಂಚೆಸ್ಟರ್: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಗಾಯಾಳುವಾಗಿರುವ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರು ಮುಂದಿನ 2-3 ಪಂದ್ಯಗಳಿಗೆ ಅಲಭ್ಯರಾಗಲಿರುವರು.

ಭಾನುವಾರ ನಡೆದ ಪಂದ್ಯದ ವೇಳೆ ಐದನೇ ಓವರ್ ಎಸೆಯುತ್ತಿದ್ದ ವೇಳೆ ಭುವವೇಶ್ವರ್ ಅವರು ಬೌಲಿಂಗ್ ವೇಳೆ ಜಾರಿ ಮಂಡಿರಜ್ಜು ಸೆಳೆತಕ್ಕೆ ಒಳಗಾಗಿದ್ದರು. ಇದರ ಬಳಿಕ ಅವರು ಮತ್ತೆ ಮೈದಾನಕ್ಕೆ ಇಳಿಯಲಿಲ್ಲ.

ಭುವನೇಶ್ವರ್ ಕುಮಾರ್ ಅವರ ಬಾಕಿ ಉಳಿದ ಎರಡು ಎಸೆಯವನ್ನು ವಿಜಯ್ ಶಂಕರ್ ಅವರು ಪೂರ್ತಿಗೊಳಿಸಿದರು.

ಭುವಿ ಗಾಯ ತುಂಬಾ ಗಂಭೀರವಾಗಿಲ್ಲ. ಇದರಿಂದ ಅವರು ಗುಣಮುಖರಾಗುತ್ತಿದ್ದಾರೆ. ಮುಂದಿನ ಎರಡು ಪಂದ್ಯಗಳಿಗೆ ಅವರು ಅಲಭ್ಯರಾಗಬಹುದು. ಮೊಹಮ್ಮದ್ ಶಮಿ ಅವರ ಸ್ಥಾನ ತುಂಬಲಿದ್ದಾರೆ ಎಂದು ಕಪ್ತಾನ ವಿರಾಟ್ ಕೊಹ್ಲಿ ಪಾಕ್ ವಿರುದ್ಧದ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.