ಸನ್ ರೈಸರ್ಸ್ ಹೈದರಾಬಾದ್ ಗೆ ಹ್ಯಾಟ್ರಿಕ್ ಗೆಲುವು

ಸನ್ ರೈಸರ್ಸ್ ಹೈದರಾಬಾದ್ ಗೆ ಹ್ಯಾಟ್ರಿಕ್ ಗೆಲುವು

HSA   ¦    Apr 15, 2018 11:30:13 AM (IST)
ಸನ್ ರೈಸರ್ಸ್ ಹೈದರಾಬಾದ್ ಗೆ ಹ್ಯಾಟ್ರಿಕ್ ಗೆಲುವು

ಕೊಲ್ಕತ್ತಾ: ಮತ್ತೊಂದು ಉತ್ತಮ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ 139 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಹೈದರಾಬಾದ್ ಗೆ ಕೇನ್ ವಿಲಿಯಮ್ಸನ್ 44 ಎಸೆತಗಳಲ್ಲಿ 50 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೈದರಾಬಾದ್ 19ನೇ ಓವರ್ ನಲ್ಲಿ ಸುಲಭವಾಗಿ ಗೆಲುವು ತನ್ನದಾಗಿಸಿಕೊಂಡಿತು.

ಒಂದು ಹಂತದಲ್ಲಿ ಹೈದರಾಬಾದ್ 55 ರನ್ ಗಳಿಗೆ ಮೂರು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಆದರೆ ಶಕಿಬ್ ಉಲ್ ಹಸನ್ ಮತ್ತು ವಿಲಿಯಮ್ಸನ್ ಜತೆಯಾಗಿ 55 ರನ್ ಗಳ ಜತೆಯಾಟ ನಡೆಸಿ ತಂಡವನ್ನು ಆಘಾತದಿಂದ ಪಾರು ಮಾಡಿದರು.

27 ರನ್ ಮಾಡಿದ ಶಕಿಬ್ ಮತ್ತು ವಿಲಿಯಮ್ಸನ್ ಕೆಲವೇ ಅಂತರದಲ್ಲಿ ನಿರ್ಗಮಿಸಿದ ಕಾರಣ ಅಂತ್ಯದಲ್ಲಿ ಯೂಸುಫ್ ಪಠಾಣ್ 17 ರನ್ ಮಾಡಿ ಗೆಲುವಿನ ವಿಧಿವಿಧಾನ ಪೂರೈಸಿದರು.

ಇದಕ್ಕೂ ಮೊದಲು ಭುವನೇಶ್ವರ್ ಕುಮಾರ್ ದಾಳಿಗೆ ತತ್ತರಿಸಿದ ಕೆಕೆಆರ್, 138 ರನ್ ಗಳಿಗೆ ಆಲೌಟ್ ಆಯಿತು. ಕ್ರಿಸ್ ಲಿನ್ 49 ಮತ್ತು ದಿನೇಶ್ ಕಾರ್ತಿಕ್ 29 ರನ್ ಬಾರಿಸಿದರೆ, ಉಳಿದವರು ಎಸ್ ಆರ್ ಎಚ್ ಬೌಲಿಂಗ್ ಮುಂದೆ ಮಂಕಾದರು.