ಟೀಂ ಇಂಡಿಯಾ ಕಪ್ತಾನ ಕೊಹ್ಲಿ ಬ್ಯಾಟ್ ಹಿಡಿಯಲ್ಲವಂತೆ!

ಟೀಂ ಇಂಡಿಯಾ ಕಪ್ತಾನ ಕೊಹ್ಲಿ ಬ್ಯಾಟ್ ಹಿಡಿಯಲ್ಲವಂತೆ!

HSA   ¦    Jan 11, 2019 04:10:13 PM (IST)
ಟೀಂ ಇಂಡಿಯಾ ಕಪ್ತಾನ ಕೊಹ್ಲಿ ಬ್ಯಾಟ್ ಹಿಡಿಯಲ್ಲವಂತೆ!

ಸಿಡ್ನಿ: ನಿವೃತ್ತಿ ಬಳಿಕ ಬ್ಯಾಟ್ ಕೂಡ ಹಿಡಿಯುವುದಿಲ್ಲವೆಂದು ಟೀಂ ಇಂಡಿಯಾದ ಕಪ್ತಾನ ವಿರಾಟ್ ಕೊಹ್ಲಿ ಅವರು ಹೇಳಿರುವುದು ಎಲ್ಲರನ್ನು ನಿಬ್ಬೆರಗಾಗಿಸಿದೆ.

ನಾನು ಸಾಕಷ್ಟು ಕ್ರಿಕೆಟ್ ಆಡಿರುವೆ. ನನಗೆ ಯಾವಾಗ ಆಡಿದ್ದು ಸಾಕು ಎಂದು ಅನಿಸುತ್ತದೆಯಾ ಅಂದು ಆಟದಿಂದ ನಿವೃತ್ತಿ ಪಡೆಯುತ್ತೇನೆ. ಇದರ ಬಳಿಕ ಬ್ಯಾಟ್ ಕೂಡ ಹಿಡಿಯಲ್ಲ ಎಂದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದರು.

ಶನಿವಾರದಿಂದ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ನಡೆಯಲಿದೆ.

ನಿವೃತ್ತಿ ಬಳಿಕ ಬಿಗ್ ಬ್ಯಾಷ್ ನಲ್ಲಿ ಆಡುತ್ತಿರಾ ಎಂದು ಕೇಳಿದಾಗ, ನಿವೃತ್ತಿ ಬಳಿಕ ಬ್ಯಾಟ್ ಹಿಡಿಯುವ ಪ್ರಶ್ನೆಯೇ ಇಲ್ಲ. ನಿವೃತ್ತಿ ಬಳಿಕ ಏನು ಮಾಡಬೇಕೆಂದು ಕೂಡ ಆಲೋಚಿಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.