ರೋಹಿತ್ ಶರ್ಮಾ ಶತಕ ವ್ಯರ್ಥ: ಭಾರತಕ್ಕೆ 34 ರನ್ ಸೋಲು

ರೋಹಿತ್ ಶರ್ಮಾ ಶತಕ ವ್ಯರ್ಥ: ಭಾರತಕ್ಕೆ 34 ರನ್ ಸೋಲು

HSA   ¦    Jan 12, 2019 04:10:40 PM (IST)
ರೋಹಿತ್ ಶರ್ಮಾ ಶತಕ ವ್ಯರ್ಥ: ಭಾರತಕ್ಕೆ 34 ರನ್ ಸೋಲು

ಸಿಡ್ನಿ: ಶತಕ ಬಾರಿಸಿದ ರೋಹಿತ್ ಶರ್ಮಾ ನಡೆಸಿದ ಏಕಾಂಗಿ ಹೋರಾಟವು ವ್ಯರ್ಥವಾಗಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಭಾರತವು 34 ರನ್ ಗಳಿಂದ ಸೋಲುಂಡಿದೆ.

ಪೀಟರ್ ಹ್ಯಾಂಡ್ಸ್ಕಾಂಬ್, ಶಾನ್ ಮಾರ್ಷ್ ಮತ್ತು ಉಸ್ಮಾನ್ ಖ್ವಾಜಾ ಉತ್ತಮ ಆಟವಾಡಿ ಆಸೀಸ್ 288 ರನ್ ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. ಜಾಯ್ ರಿಚರ್ಡಸನ್, ಜಾಸನ್ ಬೆಹೆಂಡ್ರೋರ್ಫ್ ಮತ್ತು ಮಾರ್ಕಸ್ ಸ್ಟೊನಿಸ್ ಭಾರತದ ಬ್ಯಾಟಿಂಗ್ ಪಾಳಯಕ್ಕೆ ಆಘಾತ ನೀಡಿದರು.

ರಿಚರ್ಡಸನ್ 29 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಬೆಹೆಂಡ್ರೋರ್ಫ್ ಮತ್ತು ಸ್ಟೊನಿಸ್ ತಲಾ ಎರಡೆರಡು ವಿಕೆಟ್ ಕಬಳಿಸಿದರು.

ರೋಹಿತ್ ಶರ್ಮಾ 129 ಎಸೆತಗಳಲ್ಲಿ 133 ರನ್ ಮಾಡಿ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರೂ ಧೋನಿ ಹೊರತಾಗಿ ಇತರ ಬ್ಯಾಟ್ಸ್ ಮೆನ್ ಗಳು ಉತ್ತಮ ಜತೆಯಾಟ ನೀಡಲಿಲ್ಲ.

22ನೇ ಶತಕ ಬಾರಿಸಿದ ರೋಹಿತ್ ಆರು ಸಿಕ್ಸರ್ ಮತ್ತು ಹತ್ತು ಬೌಂಡರಿ ಬಾರಿಸಿದರು. ಧೋನಿ 51 ರನ್ ಮಾಡಿ ಏಕದಿನ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಪೂರೈಸಿದರು. ಆದರೆ ಬೆಹೆಂಡ್ರೋರ್ಫ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ನಿರ್ಗಮಿಸಿದರು.

ಇದರ ಬಳಿಕ ಭಾರತದ ಇನ್ನಿಂಗ್ಸ್ ಸಂಪೂರ್ಣವಾಗಿ ಕುಸಿಯಿತು. ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ ಎರಡಂಕೆ ಮೊತ್ತ ತಲುಪಲು ವಿಫಲರಾದರು.