ಮೊಹಾಲಿ ಏಕದಿನ ವೇಳೆ ಧೋನಿ ನಿವೃತ್ತಿ!

ಮೊಹಾಲಿ ಏಕದಿನ ವೇಳೆ ಧೋನಿ ನಿವೃತ್ತಿ!

HSA   ¦    Dec 05, 2017 02:09:23 PM (IST)
ಮೊಹಾಲಿ ಏಕದಿನ ವೇಳೆ ಧೋನಿ ನಿವೃತ್ತಿ!

ಮೊಹಾಲಿ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಧೋನಿ ನಿವೃತ್ತಿಯಾಗಲಿದ್ದಾರೆ ಎನ್ನುವ ಸುದ್ದಿಯು ಈಗಾಗಲೇ ಹರಡಿದೆ.

ಮೊಹಾಲಿಯಲ್ಲಿ ಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯವು ನಡೆಯಲಿದೆ. ಈ ವೇಳೆ ಧೋನಿ ನಿವೃತ್ತಿಯ ಸಂಭ್ರಮಾಚರಣೆಯೂ ನಡೆಯಲಿರುವುದು ಎಂದು ಮೂಲಗಳು ತಿಳಿಸಿವೆ.

ಆದರೆ ಕಪ್ತಾನ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾಗುತ್ತಿದ್ದಾರೆಂದು ನೀವು ಯೋಚಿಸಿದ್ದರೆ ಅದು ಖಂಡಿತವಾಗಿ ತಪ್ಪು. ಯಾಕೆಂದರೆ ನಿವೃತ್ತಿಯಾಗುತ್ತಾ ಇರುವುದು ಕಳೆದ ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿರುವ ಧೋನಿ!

ಧೋನಿ ಪೊಲೀಸ್ ಇಲಾಖೆಗೆ ಹಲವಾರು ಶೋಧ ಕಾರ್ಯಗಳಲ್ಲಿ ನೆರವು ನೀಡಿದೆ. ಧೋನಿಯೊಂದಿಗೆ ಇಲಾಖೆಯಲ್ಲಿರುವ ಇತರ ಎರಡು ನಾಯಿಗಳಾಗಿರುವ ಜಾನ್ ಹಾಗೂ ಪ್ರೀತಿ ಕೂಡ ನಿವೃತ್ತಿಯಾಗಲಿದೆ. ಇವುಗಳನ್ನು ದತ್ತು ನೀಡಲಾಗುತ್ತದೆ ಎಂದು ಮೊಹಾಲಿ ಪೊಲೀಸ್ ಇಲಾಖೆ ತಿಳಿಸಿದೆ.