ಮುಂದಿನ ಆದೇಶ ಬರುವ ತನಕ ಪಾಂಡ್ಯ, ರಾಹುಲ್ ಅಮಾನತು

ಮುಂದಿನ ಆದೇಶ ಬರುವ ತನಕ ಪಾಂಡ್ಯ, ರಾಹುಲ್ ಅಮಾನತು

HSA   ¦    Jan 11, 2019 05:44:11 PM (IST)
ಮುಂದಿನ ಆದೇಶ ಬರುವ ತನಕ ಪಾಂಡ್ಯ, ರಾಹುಲ್ ಅಮಾನತು

ನವದೆಹಲಿ: ಟೀಂ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ಳುವವರೆಗೆ ಅಮಾನತು ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸಮಿತಿ(ಸಿಒಎ) ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಂಡ್ಯ ಮತ್ತು ರಾಹುಲ್ ಮಹಿಳೆಯರ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದರು. ಇದು ಭಾರೀ ಟೀಕೆಗೆ ಗುರಿಯಾಗಿತ್ತು.

ಪಾಂಡ್ಯ ಮತ್ತು ರಾಹುಲ್ ಇಬ್ಬರನ್ನು ಅಮಾನತು ಮಾಡಲಾಗಿದೆ. ಆದರೆ ವಿಚಾರಣೆ ಬಾಕಿ ಇದೆ ಎಂದು ರಾಯ್ ಹೇಳಿದ್ದಾರೆ.