ಮಹಿಳೆಯರ ಬಗ್ಗೆ ಕೀಳು ಮಾತು: ಪಾಂಡ್ಯ, ರಾಹುಲ್ ಗೆ ಬಿಸಿಸಿಐ ಶೋಕಾಸ್ ನೋಟಿಸ್

ಮಹಿಳೆಯರ ಬಗ್ಗೆ ಕೀಳು ಮಾತು: ಪಾಂಡ್ಯ, ರಾಹುಲ್ ಗೆ ಬಿಸಿಸಿಐ ಶೋಕಾಸ್ ನೋಟಿಸ್

HSA   ¦    Jan 09, 2019 06:37:47 PM (IST)
ಮಹಿಳೆಯರ ಬಗ್ಗೆ ಕೀಳು ಮಾತು: ಪಾಂಡ್ಯ, ರಾಹುಲ್ ಗೆ ಬಿಸಿಸಿಐ ಶೋಕಾಸ್ ನೋಟಿಸ್

ನವದೆಹಲಿ: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಗೆ ಬಿಸಿಸಿಐ ಬುಧವಾರ ಶೋಕಾಸ್ ನೋಟಿಸ್ ನೀಡಿದೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ಇಬ್ಬರು ಕ್ರಿಕೆಟಿಗರು ಮಹಿಳೆಯರ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದರು. ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ತನ್ನ ಹೇಳಿಕೆಗೆ ಹಾರ್ದಿಕ್ ಪಾಂಡ್ಯ ಕ್ಷಮೆ ಕೇಳಿದ್ದರು. ಆಟಗಾರರ ವರ್ತನೆಯಿಂದ ಕೆರಳಿರುವ ಬಿಸಿಸಿಐ, ಇನ್ನು ಮುಂದೆ ಇಂತಹ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸಿದೆ.

ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದು ಕೈಸೇರಿದ 24 ಗಂಟೆಗಳ ಒಳಗಡೆ ಉತ್ತರಿಸುವಂತೆ ತಾಕೀತು ಮಾಡಲಾಗಿದೆ ಎಂದು ಕ್ರಿಕೆಟ್ ಆಡಳಿತ ಸಮಿತಿ ಅಧ್ಯಕ್ಷ ವಿನೋದ್ ರೈ ತಿಳಿಸಿದ್ದಾರೆ.

ಹೆಚ್ಚು ಮಹಿಳೆಯರ ಜತೆಗೆ ಇರುವುದು ಮತ್ತು ಆ ಬಗ್ಗೆ ತನ್ನ ಪಾಲಕರ ಜತೆ ಬಿಚ್ಚು ಮನಸ್ಸಿನಿಂದ ಮಾತನಾಡುವುದಾಗಿ ಪಾಂಡ್ಯ ಹೇಳಿದ್ದರು. ಕ್ಲಬ್ ನಲ್ಲಿ ಮಹಿಳೆಯರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂದು ನೋಡಲು, ಗಮನಿಸಲು ನನಗಿಷ್ಟ ಎಂದು ಹೇಳಿದ್ದರು.