ತನ್ನ 37 ಮೊಮ್ಮಕ್ಕಳ ಸಮ್ಮುಖದಲ್ಲೇ ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಆದ 83 ವರ್ಷದ ಆನಾ ಒಬಾರಿಯೋ!

ತನ್ನ 37 ಮೊಮ್ಮಕ್ಕಳ ಸಮ್ಮುಖದಲ್ಲೇ ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಆದ 83 ವರ್ಷದ ಆನಾ ಒಬಾರಿಯೋ!

Jan 11, 2017 01:45:17 PM (IST)

ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಎಂಬ ಖ್ಯಾತಿಗೆ ಅರ್ಜೇಂಟೀನಾದ ಆನಾ ಒಬಾರಿಯೋ ಡೆ ಪೆರೇರಾ ಇರೋಲಾ ಅವರು ಭಾಜನರಾಗಿದ್ದಾರೆ. ಇವರು ತಮ್ಮ 83ನೇ ವಯಸ್ಸಿನಲ್ಲಿ ದೇಶದ ಸೀನಿಯರ್ ಮಾಸ್ಟರ್ಸ್ ಟೆನಿಸ್ ಚಾಂಪಿಯನ್ ಆಗಿದ್ದಾರೆ.

ಇಳಿವಯಸ್ಸಿನಲ್ಲಿ ತಮ್ಮ ಚಾಂಪಿಯನ್ ಕನಸನ್ನು ಈಡೇರಿಸಿಕೊಂಡಿರುವ ಆನಾ, ಟೆನಿಸ್ ಆಡುವುದನ್ನು 1949ರಲ್ಲಿ ಬಿಟ್ಟಿದ್ದ ಅವರು ತನ್ನ ಗಂಡನ ಆಸೆಯಂತೆ ಮಕ್ಕಳ ಲಾಲನೆ-ಪಾಲನೆ ಮಾಡುತ್ತಿದ್ದರು.

ಗಂಡನ ಅಸೆಯಂತೆ ಟೆನಿಸ್ ಬಿಟ್ಟ ಆನಾ 20 ವರ್ಷಗಳ ಕಾಲ ತಮ್ಮ 10 ಮಕ್ಕಳನ್ನು ಬೆಳೆಸುವುದರಲ್ಲೇ ಕಳೆದು, ಇದೀಗ ಚಾಂಪಿಯನ್ ಆಗಿರುವ ಅವರು ತಮ್ಮ 37 ಮೊಮ್ಮಕ್ಕಳ ಸಮ್ಮುಖದಲ್ಲೇ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆನಾ ಅವರು ತನ್ನ 18 ನೇ ವಯಸ್ಸಿನಲ್ಲಿ ಮದುವೆಯಾಗಿ ಟೆನಿಸ್ ನಿಂದ ಹಿಂದೆ ಸರಿದಿದ್ದು, ಸಂಪ್ರದಾಯವಾದಿ ಅರ್ಜೇಂಟೀನಾದಲ್ಲಿ 1940ರ ದಶಕದಲ್ಲಿ ಹೆಣ್ಣಮಕ್ಕಳು ಟೆನಿಸ್ ಆಡುವುದು ಕಷ್ಟಕರವಾಗಿತ್ತು.