ಕುಸ್ತಿ ಪಟು ಬಜರಂಗ್ ಪೂನಿಯಾಗೆ ಖೇಲ್ ರತ್ನ ಪ್ರಶಸ್ತಿ

ಕುಸ್ತಿ ಪಟು ಬಜರಂಗ್ ಪೂನಿಯಾಗೆ ಖೇಲ್ ರತ್ನ ಪ್ರಶಸ್ತಿ

HSA   ¦    Aug 16, 2019 04:04:50 PM (IST)
ಕುಸ್ತಿ ಪಟು ಬಜರಂಗ್ ಪೂನಿಯಾಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ಕುಸ್ತಿ ಪಟು ಬಜರಂಗ್ ಪೂನಿಯಾ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿ-2019 ನೀಡಿ ಗೌರವಿಸಲಾಗುವುದು ಎಂದು ವರದಿಗಳು ಹೇಳಿವೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪ್ರಶಸ್ತಿ ಸಮಿತಿಯು, ಕುಸ್ತಿ ಕ್ಷೇತ್ರದಲ್ಲಿ ನೀಡುತ್ತಿರುವ ಏಕರೂಪದ ಪ್ರದರ್ಶನ ಮತ್ತು ದೇಶಕ್ಕಾಗಿ ಅವರು ಖ್ಯಾತಿ ತಂದಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದಿದೆ.

ಈ ಪ್ರತಿಷ್ಠಿತ ಪ್ರಶಸ್ತಿಗೆ ಪೂನಿಯಾ ಅವರೊಂದಿಗೆ ವಿನೇಶ್ ಪೋಗಟ್ ಹೆಸರನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯೂಎಫ್ ಐ) ಪ್ರಸ್ತಾಪಿಸಿತ್ತು.

ಟಿಬಿಲಿಸಿ ಗ್ರ್ಯಾನ್ ಫ್ರೀಯಲ್ಲಿ ಪೂನಿಯಾ ಅವರು ಇರಾಣ್ ನ ಪೆಯಿಮಾನ್ ಬಿಬ್ಯಾನಿ ವಿರುದ್ಧ 65 ಕೆಜಿ ಫೈನಲ್ ನಲ್ಲಿ ಗೆಲುವು ದಾಖಲಿಸಿಕೊಂಡು ಸ್ವರ್ಣ ಪದಕವನ್ನು ಗೆದ್ದಿದ್ದರು.