ವಿಶ್ವಕಪ್ ಶೂಟಿಂಗ್: ಸ್ವರ್ಣ ಗೆದ್ದ ಭಾರತದ ವಲರಿವನ್

ವಿಶ್ವಕಪ್ ಶೂಟಿಂಗ್: ಸ್ವರ್ಣ ಗೆದ್ದ ಭಾರತದ ವಲರಿವನ್

HSA   ¦    Aug 29, 2019 04:52:24 PM (IST)
ವಿಶ್ವಕಪ್ ಶೂಟಿಂಗ್: ಸ್ವರ್ಣ ಗೆದ್ದ ಭಾರತದ ವಲರಿವನ್

ರಿಯೊ ಡೆ ಜನೆರೊ: ಐಎಸ್ ಎಸ್ ಎಫ್ ವಿಶ್ವಕಪ್ ನ 10 ಮೀ. ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ್ ಅವರು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

ಅಪೂರ್ವಿ ಚಾಂದೆಲಾ ಮತ್ತು ಅಂಜಲಿ ಭಾಗ್ವತ್ ಬಳಿಕ ಈ ಸಾಧನೆ ಮಾಡಿದ ಭಾರತದ ಮೂರನೇ ಮಹಿಳೆ ಎಂಬ ಗೌರವಕ್ಕೆ ವಲರಿವನ್ ಅವರು ಪಾತ್ರರಾಗಿದ್ದಾರೆ.

ತಮಿಳುನಾಡಿನ 20ರ ಹರೆಯದ ಶೂಟರ್ 251.7 ಅಂಕಗಳೊಂದಿಗೆ ಸ್ವರ್ಣ ಪದಕ ಗೆದ್ದರು. ಇಂಗ್ಲೆಂಡಿನ ಸಿಯೋನೈಡ್ ಮೆಕಿಂತೋಷ್ ಅವರು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಚೈನೀಸ್ ತೈಪೇಯಿಯ ಯಿಂಗ್-ಶಿನ್ ಲಿನ್ ಅವರು ಕಂಚಿನ ಪದಕ ಪಡೆದರು.

ವಲರಿವನ್ ಅವರು ಮ್ಯೂನಿಚ್ ನಲ್ಲಿ ನಡೆದ ಐಎಸ್ ಎಸ್ ಎಫ್ ವಿಶ್ವಕಪ್ ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದರು. ಆದರೆ ಇಲ್ಲಿ ಅವರು ಅಂಜುಮ್ ಮೌದ್ಗಿಲ್ ಮತ್ತು ಅಪೂರ್ವಿ ಚಾಂದೇಲ್ ಹಿಂದಿಕ್ಕೆ ಪದಕ ಗೆದ್ದಿದ್ದಾರೆ.