ಎಸ್.ಡಿ.ಎಂ. ಪಿ.ಜಿ.ಸೆಂಟರ್ : “ಪ್ರೀಮಿಯರ್ ಲೀಗ್ -2019” ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾವಳಿ

ಎಸ್.ಡಿ.ಎಂ. ಪಿ.ಜಿ.ಸೆಂಟರ್ : “ಪ್ರೀಮಿಯರ್ ಲೀಗ್ -2019” ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾವಳಿ

May 16, 2019 10:56:41 AM (IST)
ಎಸ್.ಡಿ.ಎಂ. ಪಿ.ಜಿ.ಸೆಂಟರ್ : “ಪ್ರೀಮಿಯರ್ ಲೀಗ್ -2019” ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾವಳಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಸ್ನಾತ್ತಕೋತ್ತರ ಆಡಳಿತ್ತೋದ್ಯಮ ಮತ್ತು ಸಂಶೋಧನ ಕೇಂದ್ರ, ಮಂಗಳೂರು ಸಂಸ್ಥೆಯಿಂದ ಎಸ್.ಡಿ.ಎಂ. “ಪ್ರೀಮಿಯರ್ ಲೀಗ್ -2019” ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾವಳಿಯು ಫಿಶರಿಸ್ ಕಾಲೇಜ್ ಮೈದಾನದಲ್ಲಿ ಈಚೆಗೆ ನಡೆಯಿತು.

ಕ್ರಿಕೆಟ್ ಪಂದ್ಯಾವಳಿಯನ್ನು ಸಂಸ್ಥೆಯ ನಿರ್ದೆಶಕರಾದ ಡಾ. ಸೀಮಾ.ಎಸ್. ಶೆಣೈ ಉದ್ಘಾಟಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ.ಜೋಮನ್ ಲೋನಪ್ಪನ್ ಭಾಗವಹಿಸಿದ ಕಾಲೇಜುಗಳನ್ನು ಸ್ವಾಗತಿಸಿದರು.

ಈ ಪಂದ್ಯಾವಳಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಎಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್ಮೆಂಟ್ ಹಾಗೂ ಡೆಂಟಲ್ ಸೈನ್ಸ್ ಸೇರಿದಂತೆ ಹಲವಾರು ಪದವಿ ಮತ್ತು ಸ್ನಾತ್ತಕೋತ್ತರ ಕಾಲೇಜುಗಳು ಭಾಗವಹಿಸಿದ್ದವು. ಈ ಸಂಧರ್ಭದಲ್ಲಿ ಎಸ್.ಡಿ.ಎಂ. ಎಂ.ಬಿ.ಎ. ವಿದ್ಯಾರ್ಥಿಗಳ ಆಹಾರದ ಮಳಿಗೆಗಳು ಎಲ್ಲರ ಗಮನ ಸೆಳೆದವು.

ಎರಡು ದಿನಗಳ ಪಂದ್ಯಾವಳಿಯಲ್ಲಿ ಎಸ್.ಡಿ.ಎಂ. ಐ.ಟಿ.ಐ.ಕಾಲೇಜ್, ಉಜಿರೆ ಪ್ರಥಮ ಟ್ರೋಫಿ ಮತ್ತು 10,000 ನಗದು ಬಹುಮಾನವನ್ನು ಪಡೆಯಿತು ಹಾಗೂ ಶ್ರೀದೇವಿ ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ದ್ವಿತೀಯ ಟ್ರೋಫಿ ಮತ್ತು 5,000 ನಗದು ಬಹುಮಾನವನ್ನು ಪಡೆಯಿತು. ವಿದ್ಯಾರ್ಥಿ ಸಂಯೋಜಕರಾದ ರಕ್ಷಿತ್ ಶೆಟ್ಟಿ ಮತ್ತು ವೆಲ್ವಿನ್ ಉಪಸ್ಥಿತರಿದ್ದರು.