ನಿದಾಸ್ ಕಪ್ ಟ್ವೆಂಟಿ- 20 ಸರಣಿ ಪಂದ್ಯಾಟ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ನಿದಾಸ್ ಕಪ್ ಟ್ವೆಂಟಿ- 20 ಸರಣಿ ಪಂದ್ಯಾಟ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

YK   ¦    Mar 13, 2018 11:05:00 AM (IST)
ನಿದಾಸ್ ಕಪ್ ಟ್ವೆಂಟಿ- 20 ಸರಣಿ ಪಂದ್ಯಾಟ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಕೊಲಂಬೊ: ಸೋಮವಾರ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ- ಶ್ರೀಲಂಕಾ ನಡುವೆ ನಡೆದ ನಿದಾಸ್ ಟ್ವೆಂಟಿ- 20 ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಬಲದಿಂದ ಭಾರತ 6ವಿಕೆಟ್ ಗಳಿಂದ ಶ್ರೀಲಂಕಾವನ್ನು ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 19ಓವರ್ ಗಳಲ್ಲಿ 9 ವಿಕೆಟ್ ಗಳಿಗೆ 152 ರನ್ ಗಳನ್ನು ಗಳಿಸಿತು. ಭಾರತ 17.3 ಓವರ್ ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್ ಬಲದಿಂದ 4 ವಿಕೆಟ್ ಕಳೆದುಕೊಂಡು ಗುರಿ ಸೇರಿತು.

ಮೊದಲಿಗೆ ಮಳೆ ಅಡ್ಡಿ: ಪಂದ್ಯಾಟ ಆರಂಭದ ವೇಳೆ ತುಂತುರು ಮಳೆ ಸುರಿದ ಕಾರಣ ಪಿಚ್ ಒದ್ದೆಯಾಗಿತ್ತು. ಇದರಿಂದ ಒಂದೂಕಾಲು ತಾಸು ತಡವಾಗಿ ಪಂದ್ಯಾಟವನ್ನು ಆರಂಭಿಸಿ 19 ಓವರ್ ಗಳಿಗೆ ನಿಗದಿ ಪಡಿಸಲಾಯಿತು.