ರಾಷ್ಟ್ರೀಯ, ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಸಾಧನೆ

ರಾಷ್ಟ್ರೀಯ, ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಸಾಧನೆ

YK   ¦    Feb 13, 2018 04:58:08 PM (IST)
ರಾಷ್ಟ್ರೀಯ, ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಸಾಧನೆ

ಮೂಡುಬಿದಿರೆ: ಅಂತರ್ ವಿ.ವಿ. ಹಾಗೂ ರಾಷ್ಟ್ರೀಯ ಸೀನಿಯರ್ಸ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ರಾಷ್ಟ್ರ ಮತ್ತು ಮಂಗಳೂರು ವಿವಿ ತಂಡವನ್ನು ಪ್ರತಿನಿಧಿಸಿದ್ದ ಆಳ್ವಾಸ್ ವಿದ್ಯಾರ್ಥಿಗಳು ಅಮೋಘ ಸಾಧನೆಯೊಂದಿಗೆ ಹೊಸ ದಾಖಲೆಯ ಸಾಧನೆ ಮಾಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂತರ್ ವಿವಿ ಚಾಂಪಿಯನ್ಸ್: ಕಳೆದ ಫೆ.5ರಿಂದ9ರವರೆಗೆ ಆಂಧ್ರದ ದ್ರಾವಿಡಿಯನ್ ಕುಪ್ಪಂ ವಿವಿಯಲ್ಲಿ ನಡೆದ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ತಂಡದ ಎಲ್ಲ10 ಮಂದಿ ಆಟಗಾರರು ಆಳ್ವಾಸ್ನವರಾಗಿದ್ದು ಸತತ 4ನೇ ಬಾರಿಗೆ ಚಾಂಪಿಯನ್ಶಿಪ್ ಗೆಲುವಿಗೆ ಶ್ರಮಿಸಿದ್ದಾರೆ. ಮಂಗಳೂರು ವಿವಿಯು ಈ ಮೂಲಕ ಸತತ 14ನೇ ಬಾರಿಗೆ ಟೂರ್ನಿಯ ಲೀಗ್ ಹಂತಕ್ಕೆ ಪ್ರವೇಶಿಸಿದ ಸಾಧನೆ, ಈ ಪೈಕಿ 8 ಬಾರಿ ಚಿನ್ನ, 3ಬಾರಿ ಬೆಳ್ಳಿ ಪದಕ ಪಡೆದಿದೆ ಎಂದವರು ಹೇಳಿದರು.

ರಾಷ್ಟ್ರೀಯ ಚಾಂಪಿಯನ್ಸ್: ಹರಿಯಾಣಾದ ಗುರ್ಗಾಂನಲ್ಲಿ ನಡೆದ 63ನೇ ರಾಷ್ಟ್ರೀಯ ಸೀನಿಯರ್ಸ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ 7 ಮಂದಿ ಆಳ್ವಾಸ್ ಕ್ರೀಡಾಪಟುಗಳು ರಾಜ್ಯ ತಂಡ ಸತತ 3ನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಶ್ರಮಿಸಿದ್ದಾರೆ.

ಸತತ 10 ನೇಬಾರಿಗೆ ಪದಕಗಳಿಸುವ ದಾಖಲೆ ನಿರ್ಮಾಣವಾಗಿದೆ. ಆಳ್ವಾಸ್ನ ಜಯಲಕ್ಷ್ಮೀ ಜಿ. ಹಾಗೂ ಪಲ್ಲವಿ ಎಸ್.ಕೆ. ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪಡೆದಿದ್ದಾರೆ ಎಂದ ಡಾ. ಆಳ್ವ ರಾಜ್ಯದಲ್ಲಿ ಬಾಲ್ ಬ್ಯಾಡ್ಮಿಂಟನ್ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಆಳ್ವಾಸ್ನ ಸಾಧಕ ವಿದ್ಯಾರ್ಥಿಗಳು ದತ್ತು ಸ್ವೀಕಾರ ಯೋಜನೆಯಡಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.