ಬಾಕ್ಸರ್ ಮೇರಿ ಕೋಮ್ ಗೆ ಅತ್ಯುತ್ತಮ ಅಥ್ಲೆಟಿಕ್ ಪ್ರಶಸ್ತಿ

ಬಾಕ್ಸರ್ ಮೇರಿ ಕೋಮ್ ಗೆ ಅತ್ಯುತ್ತಮ ಅಥ್ಲೆಟಿಕ್ ಪ್ರಶಸ್ತಿ

HSA   ¦    Aug 30, 2019 02:11:25 PM (IST)
ಬಾಕ್ಸರ್ ಮೇರಿ ಕೋಮ್ ಗೆ ಅತ್ಯುತ್ತಮ ಅಥ್ಲೆಟಿಕ್ ಪ್ರಶಸ್ತಿ

ನವದೆಹಲಿ: ಮಲೇಶಿಯಾದ ಕೌಲಲಾಂಪುರದಲ್ಲಿ ನಡೆದ ಸಮಾರಂಭದಲ್ಲಿ ಏಶ್ಯನ್ ಸ್ಫೋರ್ಟ್ಸ್ ರೈಟರ್ಸ್ ಯೂನಿಯನ್ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಅವರಿಗೆ ಇತ್ತೀಚೆಗೆ ಅತ್ಯುತ್ತಮ ಮಹಿಳಾ ಅಥ್ಲೆಟಿಕ್ ಎಂದು ಸನ್ಮಾನಿಸಿದೆ.

ಏಶ್ಯಾದ ಮಹಿಳಾ ಬಾಕ್ಸರ್ ಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿರುವ ಮೇರಿ ಕೋಮ್ ಅವರ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಮೇರಿ ಕೋಮ್ ಅವರು ಆರು ಸಲ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು ಮತ್ತು ಏಳು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅವರು ಪದಕ ಗೆದ್ದುಕೊಂಡಿದ್ದರು.