ಲಂಕಾ ವಿರುದ್ಧದ ಟಿ-20ಗೆ ಕೊಹ್ಲಿಗೆ ವಿಶ್ರಾಂತಿ

ಲಂಕಾ ವಿರುದ್ಧದ ಟಿ-20ಗೆ ಕೊಹ್ಲಿಗೆ ವಿಶ್ರಾಂತಿ

HSA   ¦    Dec 05, 2017 10:27:20 AM (IST)
ಲಂಕಾ ವಿರುದ್ಧದ ಟಿ-20ಗೆ ಕೊಹ್ಲಿಗೆ ವಿಶ್ರಾಂತಿ

ಮುಂಬಯಿ: ಕಳೆದ ಕೆಲವು ಸಮಯದಿಂದ ತನಗೆ ವಿಶ್ರಾಂತಿ ಬೇಕು ಕೇಳುತ್ತಿದ್ದ ಕಪ್ತಾನ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶ್ರೀಲಂಕಾ ವಿದುದ್ಧದ ಟಿ-20 ಸರಣಿಗೂ ವಿಶ್ರಾಂತಿ ನೀಡಿದೆ.

ಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯು ಡಿ.20ರಂದು ಕಟಕ್ ನಲ್ಲಿ ಆರಂಭವಾಗಲಿದೆ. ಡಿ.22 ಇಂದೋರ್ ನಲ್ಲಿ ದ್ವಿತೀಯ ಮತ್ತು ಡಿ.24 ಮುಂಬಯಿಯಲ್ಲಿ ಮೂರನೇ ಪಂದ್ಯ ನಡೆಯಲಿದೆ.

ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ. ದ. ಆಫ್ರಿಕಾ ಪ್ರವಾಸದಲ್ಲಿ ಭಾರತ ಎರಡು ಟೆಸ್ಟ್, 6 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಲಿದೆ. ಡಿ.27ರಂದು ದ. ಆಫ್ರಿಕಾ ಪ್ರವಾಸಗೈಯಲಿದೆ.

ಲಂಕಾ ವಿರುದ್ಧದ ಟಿ-20ಗೆ ತಂಡ:
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನಿಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡೆ, ವಾಷಿಂಗ್ಟನ್ ಸುಂದರ್, ಯಜ್ವೇಂದ್ರ ಚಹಲ್, ಕುಲದೀಪ್ ಯಾದವ್, ದೀಪಕ್ ಹೂಡಾ, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಬೆಸಿಲ್ ತಂಪಿ ಮತ್ತು ಜಯದೇವ್ ಉನದ್ಕಟ್.

ಆಫ್ರಿಕಾ ಪ್ರವಾಸದ ಟೆಸ್ಟ್ ತಂಡ:
ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ (ಉಪ ನಾಯಕ), ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಜಸ್ಪ್ರಿತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ.