ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ರಿಚರ್ಡ್ ಹ್ಯಾಡ್ಲಿ

ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ರಿಚರ್ಡ್ ಹ್ಯಾಡ್ಲಿ

HSA   ¦    Jun 13, 2018 10:49:27 AM (IST)
ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ರಿಚರ್ಡ್ ಹ್ಯಾಡ್ಲಿ

ಕ್ರಿಸ್ಟ್ ಚರ್ಚ್: ನ್ಯೂಜಿಲೆಂಡ್ ನ ಮಾಜಿ ವೇಗಿ ರಿಚರ್ಡ್ ಹ್ಯಾಡ್ಲಿ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ 66ರ ಹರೆಯದ ಹ್ಯಾಡ್ಲಿ ಕಳೆದ ತಿಂಗಳು ಪರೀಕ್ಷೆ ನಡೆಸಿದ ವೇಳೆ ಕರುಳಿನ ಕ್ಯಾನ್ಸರ್ ಪತ್ತೆಯಾಗಿದೆ. ಕರುಳಿನ ಕ್ಯಾನ್ಸರ್ ಗಡ್ಡೆ ತೆಗೆಯಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಹ್ಯಾಡ್ಲಿ ಅವರು ಬೇಗನೆ ಚೇತರಿಸಿಕೊಳ್ಳುವರು ಎಂದು ಅವರ ಪತ್ನಿ ಲೇಡಿ ಡಿಯಾನ್ನೆ ತಿಳಿಸಿದರು.

ಹ್ಯಾಡ್ಲಿ ಅವರು 86 ಟೆಸ್ಟ್ ಮತ್ತು 115 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಒಟ್ಟು 589 ವಿಕೆಟ್ ಗಳನ್ನು ಪಡೆದಿದ್ದಾರೆ.