ಅಡಿಲೇಡ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಮಾನಿಯೊಬ್ಬರು ತನ್ನ ಫೋಟೊ ತೆಗೆಯಬೇಕೆಂದು ಕೇಳಿಕೊಂಡಿದ್ದು, ಆದರೆ ಇಲ್ಲಿ ಪಾಂಟಿಂಗ್ ಜತೆಗೆ ನಿಂತುಕೊಂಡು ಅಲ್ಲವೆನ್ನುವುದು ಮಾತ್ರ ಎಲ್ಲರನ್ನು ಬೆರಗಾಗಿಸಿದೆ!
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ನಡೆಯಲಿರುವ ಅಡಿಲೇಡ್ ಮೈದಾನದಲ್ಲಿ ಅಭಿಮಾನಿಯು ಪಾಂಟಿಂಗ್ ಗೆ ಅಚ್ಚರಿ ನೀಡಿದರು.
ಡೇನೈಟ್ ಟೆಸ್ಟ್ ಪಂದ್ಯ ನಡೆಯಲಿರುವ ಅಡಿಲೇಡ್ ನಲ್ಲಿ ಪಾಂಟಿಂಗ್ ಕೈಗೆ ಮೊಬೈಲ್ ಕೊಟ್ಟ ಅಭಿಮಾನಿ, ತನ್ನ ಫೋಟೊವನ್ನು ಆಸ್ಟ್ರೇಲಿಯಾದ ಕ್ರೀಡಾ ನಿರೂಪಕಿ ಮೆಲಾನಿ ಮೆಕ್ಲಾಫ್ಲಿನ್ ಜತೆಗೆ ತೆಗೆಯಲು ಹೇಳಿದರು.
ಪಾಂಟಿಂಗ್ ಕುಡ ನಗುತ್ತಲೇ ತನ್ನ ಅಭಿಮಾನಿಯ ಆಸೆಯನ್ನು ಈಡೇರಿಸಿದರು.