ಪಾಂಡ್ಯ, ರಾಹುಲ್ ಗೆ ಎರಡು ಪಂದ್ಯಗಳ ನಿಷೇಧ ಸಾಧ್ಯತೆ

ಪಾಂಡ್ಯ, ರಾಹುಲ್ ಗೆ ಎರಡು ಪಂದ್ಯಗಳ ನಿಷೇಧ ಸಾಧ್ಯತೆ

HSA   ¦    Jan 10, 2019 03:33:59 PM (IST)
ಪಾಂಡ್ಯ, ರಾಹುಲ್ ಗೆ ಎರಡು ಪಂದ್ಯಗಳ ನಿಷೇಧ ಸಾಧ್ಯತೆ

ನವದೆಹಲಿ: ಮಹಿಳೆಯರ ಬಗ್ಗೆ ತುಂಬಾ ಕೀಳಾಗಿ ಮಾತನಾಡಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಗೆ ಬಿಸಿಸಿಐ ಎರಡು ಏಕದಿನ ಪಂದ್ಯಗಳಿಗೆ ನಿಷೇಧ ಹೇರುವ ಸಾಧ್ಯತೆಯಿದೆ.

ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪಾಂಡ್ಯ ಮತ್ತು ರಾಹುಲ್ ಅವರು ಮಹಿಳೆಯರ ಬಗ್ಗೆ ತುಂಬಾ ಕೀಳು ಅಭಿರುಚಿಯಿಂದ ಮಾತನಾಡಿದ್ದು, ಇದರ ಬಗ್ಗೆ ಎಲ್ಲೆಡೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಬಿಸಿಸಿಐ ನಿರ್ವಾಹಕ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಅವರು ಇಬ್ಬರಿಗೂ ತಲಾ ಎರಡು ಪಂದ್ಯಗಳಿಗೆ ನಿಷೇಧ ಹೇರಲು ಶಿಫಾರಸ್ಸು ಮಾಡಿದ್ದಾರೆ.

ಇಬ್ಬರು ಆಟಗಾರರಿಗೆ ಬುಧವಾರ ಬಿಸಿಸಿಐ ಶೋಕಾಸ್ ನೋಟಿಸ್ ಜಾರಿ ಮಾಡಿ 24 ಗಂಟೆಗಳ ಒಳಗೆ ಉತ್ತರಿಸಬೇಕೆಂದು ಹೇಳಿತ್ತು.