ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ಗುಡ್ ಬೈ

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ಗುಡ್ ಬೈ

HSA   ¦    May 23, 2018 06:12:39 PM (IST)
ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ಗುಡ್ ಬೈ

ಜೋಹನ್ಸ್ ಬರ್ಗ್: ವಿಶ್ವ ಕ್ರಿಕೆಟಿನಲ್ಲಿ ತನ್ನದೇ ಆಗಿರುವ ಸ್ಪೋಟಕ ಹೊಡೆತಗಳಿಂದ ಜನಪ್ರಿಯರಾಗಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮೆನ್ ಎಬಿ ಡಿವಿಲಿಯರ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ.

14 ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಆಡುತ್ತಿರುವ ವಿಲಿಯರ್ಸ್ ಅವರು ತನ್ನ ನಿವೃತ್ತಿಗೆ ಇದು ಸಕಾಲವೆಂದು ಹೇಳಿದ್ದಾರೆ.

34ರ ಹರೆಯದ ವಿಲಿಯರ್ಸ್ ಅವರು ತನ್ನ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಇದುವರೆಗೆ 114 ಟೆಸ್ಟ್, 228 ಏಕದಿನ ಹಾಗೂ 78 ಟಿ-20 ಪಂದ್ಯಗಳನ್ನು ಆಡಿದ್ದಾರೆ.

ಎಬಿಡಿ ಎಂದೇ ಪರಿಚಿತರಾಗಿರುವ ವಿಲಿಯರ್ಸ್ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಐಪಿಎಲ್ ನಲ್ಲಿ ಆಡಿದ್ದಾರೆ.