ಟೀಂ ಇಂಡಿಯಾ ತಿರುಗೇಟು ನೀಡುವ ಸಾಧ್ಯತೆ ಶೇ.30: ಸೇವಾಗ್

ಟೀಂ ಇಂಡಿಯಾ ತಿರುಗೇಟು ನೀಡುವ ಸಾಧ್ಯತೆ ಶೇ.30: ಸೇವಾಗ್

HSA   ¦    Jan 11, 2018 01:48:27 PM (IST)
ಟೀಂ ಇಂಡಿಯಾ ತಿರುಗೇಟು ನೀಡುವ ಸಾಧ್ಯತೆ ಶೇ.30: ಸೇವಾಗ್

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ್ನು ಕಳಕೊಂಡಿರುವ ಟೀಂ ಇಂಡಿಯಾ ಮರಳಿ ತಿರುಗೇಟು ನೀಡುವ ಸಾಧ್ಯತೆ ಕೇವಲ ಶೇ.30ರಷ್ಟು ಮಾತ್ರ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೇವಾಗ್ ಅಭಿಪ್ರಾಯವಾಗಿದೆ.

ಸರಣಿಯಲ್ಲಿ ಕೇವಲ ಎರಡು ಟೆಸ್ಟ್ ಮಾತ್ರ ಬಾಕಿ ಇದೆ. ಆದರೆ ಭಾರತ ತಿರುಗೇಟು ನೀಡುವಂತಹ ಸಾಧ್ಯತೆ ಕೇವಲ ಶೇ.30ರಷ್ಟು ಮಾತ್ರ. ಎರಡನೇ ಟೆಸ್ಟ್ ನಲ್ಲಿ ಆರ್. ಅಶ್ವಿನ್ ಗೆ ಅವಕಾಶ ನೀಡುತ್ತಿದೆಯಾ ಎಂದು ಕಾದು ನೋಡಬೇಕಾಗಿದೆ ಎಂದು ಸೇವಾಗ್ ಹೇಳಿದ್ದಾರೆ.

ಆರು ಮಂದಿ ಪರಿಣಿತ ಬ್ಯಾಟ್ಸ್ ಮೆನ್ ಗಳು ಹಾಗೂ ನಾಲ್ವರು ಬೌಲರ್ ಗಳಿದ್ದರೆ ಎರಡನೇ ಟೆಸ್ಟ್ ನಲ್ಲಿ ದ. ಆಫ್ರಿಕಾಗೆ ಕಠಿಣ ಸವಾಲು ನೀಡಬಹುದು ಎಂದು ಸೇವಾಗ್ ತಿಳಿಸಿದರು.