ಲಂಕಾ ವಿರುದ್ಧ ಬಾಂಗ್ಲಾ ದಾಖಲೆಯ ಗೆಲುವು: ಮೈದಾನದಲ್ಲೇ ನಾಗಿನಿ ಡ್ಯಾನ್ಸ್ ಮಾಡಿದ ಮುಶ್ಫಿಕರ್

ಲಂಕಾ ವಿರುದ್ಧ ಬಾಂಗ್ಲಾ ದಾಖಲೆಯ ಗೆಲುವು: ಮೈದಾನದಲ್ಲೇ ನಾಗಿನಿ ಡ್ಯಾನ್ಸ್ ಮಾಡಿದ ಮುಶ್ಫಿಕರ್

YK   ¦    Mar 11, 2018 03:31:37 PM (IST)
ಲಂಕಾ ವಿರುದ್ಧ ಬಾಂಗ್ಲಾ ದಾಖಲೆಯ ಗೆಲುವು: ಮೈದಾನದಲ್ಲೇ ನಾಗಿನಿ ಡ್ಯಾನ್ಸ್ ಮಾಡಿದ ಮುಶ್ಫಿಕರ್

ಕೊಲಂಬೊ: ನಿಡಾಹಸ್ ತ್ರಿಕೋನ ಟಿ20 ಪಂದ್ಯಾವಳಿಯಲ್ಲಿ ಶ್ರೀಲಂಕಾ ವಿರುದ್ಧದ ದಾಖಲೆ ಗೆಲುವಿನ ಬಳಿಕ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಮೈದಾನದಲ್ಲೇ ನಾಗಿನಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಮುಶ್ಫಿಕರ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಂದ್ಯಾವಳಿಯ ಮೂರನೇ ಪಂದ್ಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಏರ್ಪಟ್ಟಿತ್ತು. ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ ಓವರ್ ಗೆ 6 ವಿಕೆಟ್ ಗಳ ನಷ್ಟಕ್ಕೆ 214 ರನ್ ಗಳನ್ನು ಗಳಿಸಿ ಬಾಂಗ್ಲಾದೇಶಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡಿತ್ತು.

215 ರನ್ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ 19.4 ಓವರ್ ಗೆ 5 ವಿಕೆಟ್ ಗಳ ನಷ್ಟಕ್ಕೆ 215 ರನ್ ಗಳನ್ನು ಗಳಿಸಿ ಲಂಕಾ ವಿರುದ್ಧ ರೋಚಕ ಗೆಲುವು ದಾಖಲೆಯನ್ನು ಸಾಧಿಸಿತು. ಈ ವೇಳೆ ತಮ್ಮ ಸಂಭ್ರಮವನ್ನು ನಾಗಿನಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.