ಕೊಹ್ಲಿ ಪ್ರಶಂಸೆಗೆ ಅಮೀರ್ ಪ್ರತಿಕ್ರಿಯೆ ಹೀಗಿದೆ ನೋಡಿ...

ಕೊಹ್ಲಿ ಪ್ರಶಂಸೆಗೆ ಅಮೀರ್ ಪ್ರತಿಕ್ರಿಯೆ ಹೀಗಿದೆ ನೋಡಿ...

Oct 20, 2017 04:14:48 PM (IST)
ಕೊಹ್ಲಿ ಪ್ರಶಂಸೆಗೆ ಅಮೀರ್ ಪ್ರತಿಕ್ರಿಯೆ ಹೀಗಿದೆ ನೋಡಿ...

ನವದೆಹಲಿ: ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಎದುರಿಸುವದು ತುಂಬಾ ಕಷ್ಟ ಎಂದು ಟೀಂ ಇಂಡಿಯಾದ ಕಪ್ತಾನ ವಿರಾಟ್ ಕೊಹ್ಲಿ ಹೇಳಿದ್ದು, ಇದಕ್ಕೆ ಅಮೀರ್ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

ಮೊಹಮ್ಮದ್ ಅಮೀರ್ ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಎಂದು ಸಂದರ್ಶನವೊಂದರ ವೇಳೆ ಕೊಹ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೀರ್, ಕೊಹ್ಲಿಗೆ ಒಂದು ಅವಕಾಶ ನೀಡಿದರೂ ಅವರು ಪಂದ್ಯ ಕಿತ್ತುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಕೊಹ್ಲಿ ಪ್ರಶಂಸೆಯಿಂದ ತುಂಬಾ ಸಂತಸವಾಗಿದೆ. ಕೊಹ್ಲಿ ಶ್ರೇಷ್ಠ ಆಟಗಾರ ಎಂದು ಜಗತ್ತಿಗೆ ತಿಳಿದಿದೆ. ಕೊಹ್ಲಿಗೆ ಒಂದು ಅವಕಾಶ ನೀಡಿದರೂ ಅವರು ಪಂದ್ಯ ಕಿತ್ತುಕೊಳ್ಳುವರು. ಇದರಿಂದ ಅವರ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಬೇಕಾಗುತ್ತದೆ ಎಂದು ಅಮೀರ್ ಹೇಳಿದ್ದಾರೆ.

ಚೇಸಿಂಗ್ ವೇಳೆ ಕೊಹ್ಲಿ ಸ್ಟ್ರೈಕ್ ರೇಟ್ ಅದ್ಬುತವಾಗಿದೆ. ಇದು ವಿಶ್ವದ ಯಾವುದೇ ಬೌಲರ್ ಗೆ ಕೂಡ ತುಂಬಾ ಸವಾಲಿನ ವಿಷಯ. ಕೊಹ್ಲಿ ವಿರುದ್ಧ ಒಂದು ತಪ್ಪು ಮಾಡಿದರೂ ಅಂದಿನ ಪಂದ್ಯ ನಿಮ್ಮ ಕೈತಪ್ಪಿದಂತೆ. ಐಸಿಸಿ ವಿಶ್ವ ಟಿ20ಯಲ್ಲಿ ನನಗೆ ಬ್ಯಾಟ್ ಉಡುಗೊರೆ ನೀಡಿರುವುದು ಸ್ಮರಣೀಯ ಕ್ಷಣ ಎಂದರು.