ಉಜಿರೆಯಲ್ಲಿ ರಾಷ್ಟ್ರಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟ

ಉಜಿರೆಯಲ್ಲಿ ರಾಷ್ಟ್ರಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟ

Jan 10, 2017 10:41:01 AM (IST)

ಬೆಳ್ತಂಗಡಿ: ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಂಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ ಲೀಗ್ ಸ್ಪರ್ಧೆಗಳಲ್ಲಿ ಬಲಿಷ್ಠ ತಂಡಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಹರಿಯಾಣ, ಹಿಮಾಚಲಪ್ರದೇಶ ಹಾಗೂ ಮಹಾರಾಷ್ಟ್ರ ತಂಡಗಳು ಪಂದ್ಯಗಳನ್ನು ಗೆದ್ದುಕೊಂಡಿವೆ.

ಸೋಮವಾರ ಸಂಜೆ ನಡೆದ ಪಂದ್ಯಗಳಲ್ಲಿ 25-16, 25-14, 25-6 ಅಂಕಗಳ ನೇರ ಸೆಟ್ಗಳಿಂದ ಹಿಮಾಚಲ ಪ್ರದೇಶ ತಂಡ ಛತ್ತೀಸ್ ಘಡ ತಂಡವನ್ನು ಪರಾಭವಗೊಳಿಸಿದೆ. 25-14, 25-13. 25-4 ಅಂಕಗಳ ನೇರ ಸೆಟ್ನಿಂದ ಕೇರಳ ತಂಡವು ಕೇಂದ್ರೀಯ ವಿದ್ಯಾಲಯ ಸಮಿತಿ ತಂಡವನ್ನು ಮಣಿಸಿದೆ. 25-11. 26-24, 25-10 ಅಂಕಗಳ ನೇರ ಸೆಟ್ ನಿಂದ  ಕರ್ನಾಟಕ ತಂಡವು ತೆಲಂಗಾನ ತಂಡವನ್ನು ಸೋಲಿಸಿದೆ. 25-16, 25-12, 15-0 ಅಂಕಗಳ ನೇರ ಸೆಟ್ಗಳಿಂದ ಹರಿಯಾಣ ತಂಡವು ಒಡಿಸ್ಸಾ ತಂಡದ ವಿರುದ್ಧ ಜಯಗಳಿಸಿದೆ. 25-9, 25-10, 25-7 ಅಂಕಗಳ ನೇರ ಸೆಟ್ನಲ್ಲಿ  ಮಹಾರಾಷ್ಟ್ರ ತಂಡವು ಉತ್ತರಾಖಂಡ ತಂಡದ ವಿರುದ್ದ ವಿಜಯಿಯಾಗಿದೆ.  25-12. 25-9. 25-7 ಅಂಕಗಳ ನೇರ ಸೆಟ್ಗಳಿಂದ ತಮಿಳುನಾಡು ತಂಡ ನವೋದಯ ವಿದ್ಯಾಲಯಗಳ ತಂಡದ ವಿರುದ್ದ ಗೆದ್ದಿದೆ. 25-10, 25-9, 25-7 ಅಂಕಗಳ ನೇರ ಸೆಟ್ಗಳ ಮೂಲಕ ರಾಜಸ್ಥಾನನ ತಂಡ ಸಿಬಿಎಸ್ಇ ತಂಡದ ವಿರುದ್ದ ಗೆಲುವು ದಾಖಲಿಸಿದೆ.

ಮಂಗಳವಾರ ಬೆಳಿಗ್ಗೆ  ನಡೆದ ಪಂದ್ಯಗಳಲ್ಲಿ  ಪಶ್ಚಿಮ ಬಂಗಾಳ ತಂಡ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ದ 25-4, 25-9, 25-7 ಅಂಕಗಳ ನೇರ ಸೆಟ್ ಗಳಲ್ಲಿ ಗೆಲುವನ್ನು ಕಂಡರೆ,  ಉತ್ತರಪ್ರದೇಶ ತಂಡ ಐಪಿಎಸ್ಸಿ ತಂಡದ ವಿರುದ್ದ 25-12, 25-17, 25-8 ಅಂಕಗಳ ನೇರ ಸೆಟ್ ಗಳಲ್ಲಿ ಜಯವನ್ನು ಸಾಧಿಸಿದೆ.  ಮದ್ಯಪ್ರದೇಶ ಮತ್ತು ಒಡಿಸ್ಸಾ ತಂಡಗಳ ನಡುವಿನ ಪಂದ್ಯಾಟವು ತೀವ್ರ ಹಣಾಹಣಿಯಿಂದ ಕೂಡಿದ್ದು ಕೊನೆಗೆ ಒಡಿಸ್ಸಾ ತಂಡವು 25-17, 25-23, 20-25, 25-13 ಅಂಕಗಳ ಮೂಲಕ 3-1 ಅಂತರದಿಂದ ಯಶಸ್ಸು ಕಂಡಿದೆ.  ಇನ್ನೊಂದೆಡೆ ಮಹಾರಾಷ್ಟ್ರ ತಂಡವು ಛತ್ತೀಸ್ ಘಡ ತಂಡದ ವಿರುದ್ಧ 25-21. 25-13, 25-8 ಅಂಕಗಳ ನೇರ ಸೆಟ್ ಳಿಂದ ಗೆದ್ದರೆ,  ಹಿಮಾಚಲ ಪ್ರದೇಶ ತಂಡವು ಉತ್ತರಾಖಂಡ ತಂಡವನ್ನು 25-5, 25-8. 25-8 ಅಂಕಗಳ ನೇರ ಸೆಟ್ ಗಳಲ್ಲಿ ಮಣಿಸಿದೆ.

ಮಂಗಳವಾರ ಸಂಜೆ ರಾಜಸ್ಥಾನ ಹಾಗೂ ಚಂಡೀಗಡ, ಉತ್ತರಪ್ರದೇಶ ಮತ್ತು ದೆಹಲಿ, ಬಂಗಾಲ ಮತ್ತು ಜಾರ್ಖಂಡ್, ಸಿಬಿಎಸ್ಸಿ ಹಾಗೂ ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶ, ಗುಜರಾತ್ ಮತ್ತು ತಮಿಳುನಾಡು, ಕೇರಳ ಮತ್ತು ಪಂಜಾಬ್, ಕರ್ನಾಟಕ ಮತ್ತು ಆಂಧ್ರಪ್ರದೇಶ್, ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಛತ್ತೀಸ್ಗಡ ತಂಡಗಳ ನಡುವೆ ಸ್ಪರ್ಧೆಗಳು ನಡೆಯಲಿವೆ.  ಕ್ರೀಡಾಂಗಣದಲ್ಲಿನ ನಾಲ್ಕು ಅಂಕಣಗಳಲ್ಲಿ ಪ್ರಾಧಮಿಕ ಪಂದ್ಯಗಳು ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದು 27 ತಂಡಗಳನ್ನು ಎಂಟು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನ ಅಗ್ರಸ್ಥಾನಿ ತಂಡ ಕ್ವಾಟರ್ ಫೈನಲ್ ಆಡಲು ಯೋಗ್ಯತೆ ಪಡೆಯಲಿದೆ.  

More Images