ಥ್ರೋಬಾಲ್ ತಂಡದ ವ್ಯವಸ್ಥಾಪಕರಾಗಿ ಸುಬ್ರಮಣ್ಯ

ಥ್ರೋಬಾಲ್ ತಂಡದ ವ್ಯವಸ್ಥಾಪಕರಾಗಿ ಸುಬ್ರಮಣ್ಯ

LK   ¦    Jun 18, 2017 01:36:52 PM (IST)

ನಂಜನಗೂಡು: ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಲ್ಲಿ ಜೂ20 ರಿಂದ ಜೂ24ರ ವರೆಗೆ ನಡೆಯಲಿರುವ ಇಂಡೋ- ಥೈಲ್ಯಾಂಡ್ ಅಂತರ ರಾಷ್ಟ್ರೀಯ ಥ್ರೋಬಾಲ್ ಛಾಂಪಿಯನ್ಶಿಪ್ನ ಭಾರತ ಪುರುಷರ ಥ್ರೋಬಾಲ್ ತಂಡದ ವ್ಯವಸ್ಥಾಪಕರಾಗಿ ನಂಜನಗೂಡಿನ ಎನ್.ಎಸ್.ಸುಬ್ರಮಣ್ಯ ಅವರನ್ನು ಥ್ರೋಬಾಲ್ ಫೆಡರೇಷನ್ ಆಪ್ ಇಂಡಿಯಾ ನೇಮಿಸಿದೆ.

ಎನ್.ಎಸ್.ಸುಬ್ರಮಣ್ಯ ಅವರು ಮೈಸೂರಿನ ಸೋಮಾನಿ ಬಿ.ಎಡ್. ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಶ್ರೀಲಂಕ, ಮಲೇಷಿಯಾದಲ್ಲಿ ನಡೆದ ಪ್ರಥಮ ಏಷಿಯನ್ ಜೂನಿಯರ್ ಥ್ರೋಬಾಲ್ ಛಾಂಪಿಯನ್ಶಿಪ್ನಲ್ಲಿ ಭಾರತದ ಬಾಲಕರ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಇದೆರಡರಲ್ಲ್ಲೂ ಭಾರತ ತಂಡ ಛಾಂಪಿಯನ್ ಆಗಿದ್ದನ್ನು ಸ್ಮರಿಸಬಹುದಾಗಿದೆ.