ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್

ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್

Jan 15, 2018 05:20:55 PM (IST)
ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್

ಸೆಂಚೂರಿನ್: ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ಕೊನೆಯವರೆಗೂ ಕಾಡಿದ ಕಪ್ತಾನ ವಿರಾಟ್ ಕೊಹ್ಲಿ ಅಂತಿಮವಾಗಿ ವಿಕೆಟ್ ಕಳಕೊಳ್ಳುವುದರೊಂದಿಗೆ ಟೀಂ ಇಂಡಿಯಾವು 307 ರನ್ ಗಳಿಗೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾ 28 ರನ್ ಗಳ ಅಲ್ಪ ಮುನ್ನಡೆ ಪಡೆದುಕೊಂಡಿದೆ.

ಕೊಹ್ಲಿ ಮೂರನೇ ದಿನ ಶತಕ ಬಾರಿಸಿದ್ದು ಮಾತ್ರವಲ್ಲದೆ ಕೊನೆಯ ಬ್ಯಾಟ್ಸ್ ಮೆನ್ ಆಗಿ ಪೆವಿಲಿಯನ್ ಸೇರಿದ್ದು, 217 ಎಸೆತಗಳಲ್ಲಿ 153 ರನ್ ಬಾರಿಸಿದರು. ಇದರಲ್ಲಿ 15 ಬೌಂಡರಿ ಒಳಗೊಂಡಿತ್ತು. ಕೊಹ್ಲಿ ವೇಗಿ ಮೊರ್ಕೆಲ್ ಗೆ ನಾಲ್ಕನೇ ಬಲಿಯಾದರು.

ಕಪ್ತಾನ ಕೊಹ್ಲಿಗೆ 38 ರನ್ ಮಾಡಿದ ಆರ್. ಅಶ್ವಿನ್ ಸರಿಯಾದ ಜತೆ ನೀಡಿದರು. ಆದರೆ ಕೆಳಸರದಿಯ ಇತರ ಬ್ಯಾಟ್ಸ್ ಮೆನ್ ಗಳು ಸಂಪೂರ್ಣವಾಗಿ ವಿಫಲರಾದರು.
ಸಮಿ 1, ಇಶಾಂತ್ 3 ರನ್ ಬಾರಿಸಿದರು.