ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ಡೌಟ್

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ಡೌಟ್

HSA   ¦    Mar 11, 2020 03:09:21 PM (IST)
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ಡೌಟ್

ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಗಳಿಗೆ ಕೊರೋನಾ ಭೀತಿಯಿಂದಾಗಿ ಅನುಮತಿ ನೀಡುವ ಸಾಧ್ಯತೆಯು ಕಡಿಮೆ ಇದೆ ಹೇಳಲಾಗುತ್ತಿದೆ.

ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ಕಾರಣ ಕೊರೋನಾ ಹರಡುವ ಸಾಧ್ಯತೆಯು ಇರುವುದರಿಂದಾಗಿ ಐಪಿಎಲ್ ಪಂದ್ಯಗಳನ್ನು ನಡೆಸುವುದು ಅಸಾಧ್ಯವಾಗಬಹುದು ಎಂದು ರಾಜ್ಯ ಸರ್ಕಾರವು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ಈಗಾಗಲೇ ರಾಜ್ಯ ಸರ್ಕಾರವು ನಿರ್ಬಂಧಿಸಿದೆ. ಇದರಿಂದಾಗಿ ಕೊರೋನಾ ಸೋಂಕು ತಡೆಯುವುದು ಸರ್ಕಾರದ ನಿರ್ಧಾರವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣವು ತವರು ಮೈದಾನವಾಗಿದೆ. ಒಂದು ವೇಳೆ ಐಪಿಎಲ್ ಗೆ ಅವಕಾಶ ನಿರಾಕರಿಸಿದರೆ ಅದು ಆರ್ ಸಿಬಿಗೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ.