ಅನುಷ್ಕಾ ಜತೆ ಮತ್ತೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ

ಅನುಷ್ಕಾ ಜತೆ ಮತ್ತೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ

Nov 13, 2017 01:36:30 PM (IST)
ಅನುಷ್ಕಾ ಜತೆ ಮತ್ತೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ

ಮುಂಬಯಿ: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೇಮವು ಈಗ ಗುಟ್ಟಾಗಿ ಉಳಿದಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ತಾವಿಬ್ಬರು ಮದುವೆಯಾಗುವುದಾಗಿ ವಿರಾಟ್ ಹೇಳಿಕೊಂಡಿದ್ದರು. ನ.11ರಂದು ನಡೆದ ಭಾರತೀಯ ಕ್ರೀಡಾ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಹ್ಲಿ ಅವರು ಅನುಷ್ಕಾ ಜತೆಗೆ ಕಾಣಿಸಿಕೊಂಡಿರುವ ಫೋಟೋವನ್ನು ಟ್ವಿಟ್ಟರ್ ಗೆ ಹಾಕಿದ್ದಾರೆ.

ತಾನು ಮತ್ತು ಅನುಷ್ಕಾ ಜತೆಗಿರುವಂತಹ ಫೋಟೊವನ್ನು ಟ್ವಿಟರ್ ಗೆ ಹಾಕಿದ್ದಾರೆ. ಇಬ್ಬರು ನಗುತ್ತಾ ಖುಷಿಖುಷಿಯಾಗಿಯೇ ಫೋಟೊಗೆ ಫೋಸ್ ನೀಡಿದ್ದಾರೆ.

ವಿರಾಟ್ ತನ್ನ ಪ್ರೇಮದ ಬಗ್ಗೆ ಆಗಾಗ ಹೇಳಿಕೊಳ್ಳುತ್ತಾ ಇದ್ದರೂ ಅನುಷ್ಕಾ ಮಾತ್ರ ತನ್ನ ಖಾಸಗಿ ಬದುಕಿನ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಇತ್ತೀಚೆಗೆ ಅವರಿಬ್ಬರು ಭಾರತೀಯ ಸಾಂಪ್ರದಾಯಿಕ ಉಡುಗೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.