ಗಂಡು ಮಗುವಿಗೆ ಜನ್ಮನೀಡಿದ ರಾಬಿನ್ ಪತ್ನಿ

ಗಂಡು ಮಗುವಿಗೆ ಜನ್ಮನೀಡಿದ ರಾಬಿನ್ ಪತ್ನಿ

Oct 12, 2017 11:25:13 AM (IST)
ಗಂಡು ಮಗುವಿಗೆ ಜನ್ಮನೀಡಿದ ರಾಬಿನ್ ಪತ್ನಿ

ನವದೆಹಲಿ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಹಾಗೂ ಶೀತಲ್ ದಂಪತಿಗೆ ಗಂಡು ಮಗು ಜನಿಸಿದೆ. ಈ ಸಂತೋಷದ ವಿಚಾರವನ್ನು ರಾಬಿನ್ ಉತ್ತಪ್ಪ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಮಗು ಹಾಗೂ ಪತ್ನಿ ಜತೆಗಿನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ನಮ್ಮ ಮಗು ನೈಲಿ ನೋಲನ್ ಉತ್ತಪ್ಪ ಆಗಮಿಸಿದ್ದಾನೆ. ಎಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಅಂತ ಉತ್ತಪ್ಪ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ರಾಬಿನ್ ತನ್ನ ಬಹುಕಾಲದ ಪ್ರೇಯಸಿಯಾಗಿದ್ದ ಮಾಜಿ ಟೆನ್ನಿಸ್ ಆಟಗಾರ್ತಿ ಶೀತಲ್ ಅವರನ್ನ ಉತ್ತಪ್ಪ ಕಳೆದ ವರ್ಷ ಮಾರ್ಚ್ ನಲ್ಲಿ ಮದುವೆಯಾಗಿದ್ದರು.