ಜಿಪಿಎಲ್ ಉತ್ಸವದ ಕ್ರಿಕೆಟ್ ಸರಣಿಯ ಆಟಗಾರರ ಹರಾಜು

ಜಿಪಿಎಲ್ ಉತ್ಸವದ ಕ್ರಿಕೆಟ್ ಸರಣಿಯ ಆಟಗಾರರ ಹರಾಜು

Aug 13, 2019 04:02:41 PM (IST)
ಜಿಪಿಎಲ್ ಉತ್ಸವದ ಕ್ರಿಕೆಟ್ ಸರಣಿಯ ಆಟಗಾರರ ಹರಾಜು

ಮಂಗಳೂರು: ಫುಜ್ಲಾನಾ ಜಿಎಸ್ ಬಿ ಪ್ರೀಮಿಯರ್ ಲೀಗ್ (ಜಿಪಿಎಲ್) 2020ರ ಹರಾಜು ಪ್ರಕ್ರಿಯೆ ಮಂಗಳೂರಿನ ಟಿವಿ ರಮಣ್ ಪೈ ಕನ್ವೆನ್ಷನ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಒಟ್ಟು ನೋಂದಾಯಿತ 366 ಆಟಗಾರರಲ್ಲಿ 272 ಮಂದಿ ಆಟಗಾರರನ್ನು ಒಟ್ಟು 16 ತಂಡಗಳ ಮಾಲೀಕರು ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡರು.

ಒಟ್ಟು 5 ಲಕ್ಷ 18 ಸಾವಿರ ರೂಪಾಯಿ ಮೊತ್ತವನ್ನು 16 ತಂಡಗಳ ಮಾಲೀಕರು ವಿನಿಯೋಗಿಸಿದ್ದಾರೆ. ರಾಕೇಶ್ ಕಾಮತ್ ಎನ್ನುವ ಆಟಗಾರ ಅತೀ ಹೆಚ್ಚು ಮೊತ್ತ 16,800 ರೂಪಾಯಿಗೆ ಕೊಡಿಯಾಲ್ ಸೂಪರ್ ಕಿಂಗ್ ತಂಡದಿಂದ ಖರೀದಿಸಲ್ಪಟ್ಟರು. ಕೊಡಿಯಾಲ್ ಸ್ಪೋರ್ಟ್ ಅಸೋಸಿಯೇಶನ್ ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ರಾಜ್ಯದಲ್ಲಿಯೇ ಮೊತ್ತ ಮೊದಲ ಬಾರಿಗೆ ತಂತ್ರಜ್ಞಾನ ಆಧರಿಸಿದ ಹರಾಜು ಪ್ರಕ್ರಿಯೆ ನಡೆಸಿತು. ಇದೊಂದು ವಿಭಿನ್ನ ಮತ್ತು ಆಧುನಿಕ ಶೈಲಿಯಿಂದ ಮಾಡಲ್ಪಟ್ಟ ಅದ್ಭುತ ವ್ಯವಸ್ಥೆ ಎಂದು ಪ್ರತಿಯೊಂದು ತಂಡದ ಮಾಲೀಕರು ಹರ್ಷಪಟ್ಟರು.

ಜಿಪಿಎಲ್ 2020 ಈ ಬಾರಿ ಇನ್ನಷ್ಟು ವೈಭಯುತವಾಗಿ ನಡೆಯಲಿದ್ದು ದೊಡ್ಡ ಉತ್ಸವದ ರೂಪವನ್ನು ಪಡೆದುಕೊಂಡಿದೆ. ಫೆಬ್ರವರಿ 14, 15 ಮತ್ತು 16 ರಂದು ನಡೆಯುವ ಈ ಉತ್ಸವ ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಹುಲ್ಲುಹಾಸಿನ ಮೈದಾನದಲ್ಲಿ ನಡೆಯಲಿದೆ. ಈ ಬಾರಿಯ ಜಿಪಿಎಲ್ ಉತ್ಸವದಲ್ಲಿ ಕ್ರಿಕೆಟ್ ಸರಣಿ ಮಾತ್ರವಲ್ಲದೆ ಹಿಂದಿನ ವರ್ಷದಂತೆ ಬೋಟಿಂಗ್, ಕಿಡ್ಸ್ ಝೋನ್, ವಿವಿಧ ಸ್ಪರ್ಧೆಗಳು, ಆಹಾರದ ಉತ್ಸವ, ವಿವಿಧ ಮಳಿಗೆಗಳ ಪ್ರದರ್ಶನ ಜಿಎಸ್ ಬಿ ಸಮಾಜ ಭಾಂದವರಿಗಾಗಿ ಇರಲಿದೆ.

ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಪ್ರವಾಹ ಪೀಡಿತರರಿಗಾಗಿ ಸಹಾಯಹಸ್ತ ಚಾಚುವಂತೆ ಎಲ್ಲಾ 16 ತಂಡಗಳ ಮಾಲೀಕರಿಗೆ, ಸಹಮಾಲೀಕರಿಗೆ ವಿನಂತಿಸಿದರು.

ಕೋಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಸಹಿತ ಅಸೋಸಿಯೇಶನ್ ನ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಅವಿನಾಶ್ ಪ್ರಭು ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್ ವಂದಿಸಿದರು. ಆರ್ ಜೆ ಕಿರಣ್ ನಿರೂಪಿಸಿದರು.

More Images