ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ಕಂಚಿನ ಪದಕ ವಿಜೇತೆ ಪಿಂಕಿ ಜಾಂಗ್ರಾ !

ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ಕಂಚಿನ ಪದಕ ವಿಜೇತೆ ಪಿಂಕಿ ಜಾಂಗ್ರಾ !

Jan 05, 2017 05:27:27 PM (IST)

ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ ಪಿಂಕಿ ಜಾಂಗ್ರಾ ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ಸ್ಪರ್ಧಿಸಲಿದ್ದಾರೆ.

ಪಿಂಕಿ ಜಾಂಗ್ರಾ ಅವರು ಸ್ಪೋರ್ಟಿ ಬಾಕ್ಸಿಂಗ್ ಪ್ರೈ.ಲಿ ಜತೆಗೆ ಈಗಾಗಲೇ ಸಹಿ ಹಾಕಿದ್ದು, ಮಹಿಳಾ ಬಾಕ್ಸಿಂಗ್ ನ ರಾಷ್ಟ್ರೀಯ ಶಿಬಿರದಲ್ಲಿದ್ದಾರೆ.

ಈಗಲೂ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್, ಹವ್ಯಾಸಿ ಬಾಕ್ಸಿಂಗ್ ನಲ್ಲಿ ಭಾಗವಹಿಸಲು ಕಾತುರದಿಂದಿರುವುದಾಗಿ ಇದರ ಜೊತೆಗೆ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಪಿಂಕಿ ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಲ್. ಸರಿತಾ ದೇವಿ ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದು, ಇದೀಗ ಪಿಂಕಿ ಜಾಂಗ್ರಾ ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.