ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್ ನಾಯಕ

ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್ ನಾಯಕ

LK   ¦    Aug 10, 2017 05:34:23 PM (IST)
ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್ ನಾಯಕ

ಮೈಸೂರು: ಎನ್.ಆರ್. ಸಮೂಹದ ಒಡೆತನದ ಸೈಕಲ್ ಪ್ಯೂರ್ ಅಗರ ಬತ್ತೀಸ್ನ ಕ್ರಿಕೆಟ್ ಫ್ರ್ಯಾಂಚೈಸ್ ಮೈಸೂರು ವಾರಿಯರ್ಸ್ ತಂಡಕ್ಕೆ ನಾಯಕನಾಗಿ ಕರುಣ್ ನಾಯರ್ ಅವರನ್ನು ನೇಮಕ ಮಾಡಲಾಗಿದೆ.ಇವರು ಈ ವರ್ಷ ಐಪಿಎಲ್ ನ ಎರಡನೇ ಹಂತದಲ್ಲಿ ದೆಹಲಿ ಡೇರ್ ಡೆವಿಲ್ಸ್ನ ನೇತೃತ್ವ ವಹಿಸಿದ ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟ್ ಪಟುವಾಗಿದ್ದಾರೆ. ಈ ಪ್ರತಿಭಾವಂತ ಕ್ರಿಕೆಟಿಗ ಮುಂಬರುವ ಟೆಸ್ಟ್ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾದ ಎ ತಂಡದ ವಿರುದ್ಧ ಆಡಲಿದ್ದು, ಭಾರತದ ಎ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣಆಫ್ರಿಕಾ ಸರಣಿಯನ್ನು ಮುಗಿಸಿದ ನಂತರ ಈ ತಿಂಗಳ ಅಂತ್ಯದ ವೇಳೆಗೆ ಕರುಣ್ ಮೈಸೂರು ವಾರಿಯರ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.ಆಗಸ್ಟ್ 14 ರಿಂದ ಎಸ್ಜೆಸಿಇ ಮೈದಾನದಲ್ಲಿ ತಂಡವು ತಮ್ಮ ಅಭ್ಯಾಸ ಕಾರ್ಯವನ್ನು ಪ್ರಾರಂಭಿಸಲಿದೆ. ಸೆಪ್ಟೆಂಬರ್ 1ರಿಂದ ಪಂದ್ಯಾವಳಿ ಆರಂಭವಾಗಲಿದೆ.

ತಂಡದ ಇಬ್ಬರು ಪ್ರಮುಖ ಆಟಗಾರರಾದ ಸುಚಿತ್ ಜೆ ಮತ್ತು ಶ್ರೇಯಸ್ಗೋಪಾಲ್ ತಂಡದ ಅಭ್ಯಾಸ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಆಯ್ಕೆ ತಂಡದ ಸದಸ್ಯರ ಜೊತೆಗೆ ಪ್ರತಿಭಾ ಅನ್ವೇಷಣೆ ಮೂಲಕ ಆಯ್ಕೆಯಾದ 12 ಆಟಗಾರರು ಸೇರಿಕೊಳ್ಳಲಿದ್ದಾರೆ. ಇವರಲ್ಲಿ ಇಬ್ಬರು ಆಟಗಾರರು ಅಧಿಕೃತವಾಗಿ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕೆಪಿಎಲ್ 2017ರ ಪಂದ್ಯಾವಳಿಯಲ್ಲಿ ಮೈಸೂರು ವಾರಿಯಸರ್್ ತಂಡದಲ್ಲಿ ಅಜರ್ುನ್ ಹೊಯ್ಸಳ, ಸುಚಿತ್ಜೆ, ಕೆ.ಸಿ. ಅವಿನಾಶ್, ಶ್ರೇಯಸ್ಗೋಪಾಲ್, ಸುನೀಲ್ರಾಜು, ಭಾರತ್ಎನ್.ಪಿ., ಮಂಜುನಾಥ್ಎಸ್.ಪಿ., ಎಸ್.ಎಲ್.ಅಕ್ಷಯ್, ನಿಕಿತ್ಎಸ್., ವೈಶಾಖ್ಕುಮಾರ್, ಪ್ರತೀಕ್ಷ್ಆರ್., ಶಿವಿಲ್ಕೌಶಿಕ್, ಶ್ರೀಜಿತ್ ಕೆ.ಎಲ್., ವಿನೀತ್ಯಾದವ್, ಕುಶಾಲ್ ವಾದ್ವಾನ, ವಿಕಾಸ್ಕುಮಾರ್ ಸಿನ್ಹಾ, ರಾಮ್ ಸರಿಕ್ಯಾದವ್ ಆಟವಾಡುತ್ತಿದ್ದು, ತಂಡದ ಮುಖ್ಯಕೋಚ್ ಆಗಿ ಖಘಿ ಮುರಳಿ ಮತ್ತು ಸಹಾಯಕಕೋಚ್ ಆಗಿ ವಿಜಯ್ ಮಡಿಯಾಳ್ಕರ್ ಅವರು ಮುಂದುವರಿಯಲಿದ್ದಾರೆ. ಅವರೊಂದಿಗೆ ತರಬೇತುದಾರರಾಗಿ ಶ್ಯಾಮ್ರಾವ್ ಮತ್ತು ಅವರ ಸಹಾಯಕರಾಗಿ ರಾಘವೇಂದ್ರ ಇದ್ದಾರೆ.