ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಮಂಗಳೂರಿನ ಆದಿತ್ಯ ಶೆಣೈ

ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಮಂಗಳೂರಿನ ಆದಿತ್ಯ ಶೆಣೈ

Jan 17, 2019 06:24:54 PM (IST)
ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಮಂಗಳೂರಿನ ಆದಿತ್ಯ ಶೆಣೈ

ಮಂಗಳೂರು: ಕರ್ನಾಟಕ ರಾಜ್ಯ ಮಟ್ಟದ ಅಂತರ್ ಶಾಲಾ- ಕಾಲೇಜು ಕರಾಟೆ ಚಾಂಪಿಯನ್ ಶಿಪ್ 2019 ರ ಸ್ಪರ್ಧೆಯಲ್ಲಿ ಮಂಗಳೂರು ನಗರದ ಕೆನರಾ ಹೈಸ್ಕೂಲ್ ಉರ್ವಾ ಇದರ 5 ನೇ ತರಗತಿ ವಿದ್ಯಾರ್ಥಿ ಕೆ. ಆದಿತ್ಯ ಶೆಣೈ ರಾಜ್ಯದಲ್ಲಿ ತೃತೀಯ ( ಕಂಚಿನ ಪದಕ ) ಸ್ಥಾನ ಪಡಕೊಂಡಿರುತ್ತಾರೆ. 

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಆಲೈಡ್ ಆರ್ಟ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಸ್ಪರ್ಧೆ ನಡೆದಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 350 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು . ಹಳದಿ ಬೆಲ್ಟ್ ಹುಡುಗರ 10  ವರ್ಷದ ವಿಭಾಗದಲ್ಲಿ ಆದಿತ್ಯ ಶೆಣೈ ತೃತೀಯ ಸ್ಥಾನ ಪಡೆದುಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ . ಜ.13 ಮತ್ತು 14 ರಂದು ಈ ಸ್ಪರ್ಧೆ ಆಯೋಜಿಸಲಾಗಿತ್ತು .