ಸಚಿನ್ ತೆಂಡೂಲ್ಕರ್ ಗೆ ಹಾಲ್ ಆಫ್ ಫೇಮ್ ಗೌರವ

ಸಚಿನ್ ತೆಂಡೂಲ್ಕರ್ ಗೆ ಹಾಲ್ ಆಫ್ ಫೇಮ್ ಗೌರವ

HSA   ¦    Jul 19, 2019 06:03:26 PM (IST)
ಸಚಿನ್ ತೆಂಡೂಲ್ಕರ್ ಗೆ ಹಾಲ್ ಆಫ್ ಫೇಮ್ ಗೌರವ

ಲಂಡನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹಾಲ್ ಆಫ್ ಫೇಮ್ ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಸಚಿನ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ವೇಗಿ ಅಲನ್ ಡೊನಾಲ್ಡ್ ಮತ್ತು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಕ್ಯಾಥ್ರಿನ್ ಫಿಟ್ಸ್ ಪ್ಯಾಟ್ರಿಕ್ ಅವರು ಸಹ ಈ ಗೌರವಕ್ಕೆ ಪಾತ್ರವಾಗಿದ್ದಾರೆ.

ಇದು ನನಗೆ ಸಿಕ್ಕಿರುವ ಅತೀ ದೊಡ್ಡ ಗೌರವ ಎಂದು ಸಚಿನ್ ತಿಳಿಸಿದ್ದಾರೆ.

ಸಚಿನ್ ಈ ಗೌರವಕ್ಕೆ ಪಾತ್ರಾಗಿರುವ ಆರನೇ ಕ್ರಿಕೆಟಿಗ. ಇದಕ್ಕೆ ಮೊದಲು ಬಿಷನ್ ಸಿಂಗ್ ಬೇಡಿ(2009), ಕಪಿಲ್ ದೇವ್(2009), ಸುನಿಲ್ ಗಾವಸ್ಕರ್(2009), ಅನಿಲ್ ಕುಂಬ್ಳೆ(2015) ಹಾಗೂ ರಾಹುಲ್ ದ್ರಾವಿಡ್(2018) ಈ ಗೌರವಕ್ಕೆ ಪಾತ್ರರಾಗಿರುವರು.