ಕೌಂಟಿ ಕ್ರಿಕೆಟ್ ಆಡುವ ಮೊದಲೇ ವಿರಾಟ್ ಕೊಹ್ಲಿಗೆ ವಿಘ್ನ!

ಕೌಂಟಿ ಕ್ರಿಕೆಟ್ ಆಡುವ ಮೊದಲೇ ವಿರಾಟ್ ಕೊಹ್ಲಿಗೆ ವಿಘ್ನ!

HSA   ¦    May 24, 2018 03:13:32 PM (IST)
ಕೌಂಟಿ ಕ್ರಿಕೆಟ್ ಆಡುವ ಮೊದಲೇ ವಿರಾಟ್ ಕೊಹ್ಲಿಗೆ ವಿಘ್ನ!

ನವದೆಹಲಿ: ಇಂಗ್ಲೆಂಡಿನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟಿನಲ್ಲಿ ಆಡುವ ಮೊದಲೇ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿಗೆ ವಿಘ್ನ ಎದುರಾಗಿದೆ.

ಕುತ್ತಿಗೆ ನೋವಿನಿಂದ ಬಳಲುತ್ತಿರುವ ಕೊಹ್ಲಿ ಅವರು ಕೌಂಟಿಯಲ್ಲಿ ಆಡುತ್ತಿಲ್ಲವೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.

ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಕೊಹ್ಲಿ ಕುತ್ತಿಗೆ ನೋವಿಗೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ಕೌಂಟಿ ಆಡುತ್ತಿಲ್ಲವೆಂದು ಬಿಸಿಸಿಐ ಹೇಳಿದೆ.

ಜೂನ್ 14ರಿಂದ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ನಲ್ಲಿ ಕೊಹ್ಲಿ ಆಡುತ್ತಿಲ್ಲ. ಜೂನ್ 15ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕಟ್ ಅಕಾಡೆಮಿಯಲ್ಲಿ ಕೊಹ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗುವರು.