ವೈರಲ್ ಆದ ಕೊಹ್ಲಿ ಕಣ್ಣೋಟ

ವೈರಲ್ ಆದ ಕೊಹ್ಲಿ ಕಣ್ಣೋಟ

Oct 10, 2017 09:52:38 AM (IST)
ವೈರಲ್ ಆದ ಕೊಹ್ಲಿ ಕಣ್ಣೋಟ

ಗುವಾಹಟಿ: ಆಸೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯವನ್ನಾಡಲು ಗುವಾಹಟಿಗೆ ಆಗಮಿಸಿದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ವಿಮಾಣ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಕ್ರಿಕೆಟಿಗರು ಹೋಟೆಲ್ ಗೆ ಆಗಮಿಸುತ್ತಿದ್ದಂತೆ ಹಣೆಗೆ ತಿಲಕ ಹಾಗೂ ಶಾಲು ಹೊದೆಸಿ ಅವರನ್ನು ಸ್ವಾಗತಿಸಲಾಯಿತು. ಈ ವೇಳೆ ತೆಗೆದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಈ ಫೋಟೋದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಾಲು ಹೊದಿಸುತ್ತಿರುವ ಮಹಿಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಉಳಿದ ಆಟಗಾರರಿಗೂ ಇದೇ ರೀತಿಯ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

 

More Images