ಕೊಹ್ಲಿ, ಗಂಗೂಲಿ ದಾಖಲೆ ಮುರಿದ ಸ್ಮೃತಿ ಮಂದಾನ

ಕೊಹ್ಲಿ, ಗಂಗೂಲಿ ದಾಖಲೆ ಮುರಿದ ಸ್ಮೃತಿ ಮಂದಾನ

HSA   ¦    Nov 07, 2019 04:23:08 PM (IST)
ಕೊಹ್ಲಿ, ಗಂಗೂಲಿ ದಾಖಲೆ ಮುರಿದ ಸ್ಮೃತಿ ಮಂದಾನ

ನವದೆಹಲಿ: ಏಕದಿನ ಕ್ರಿಕೆಟಿನಲ್ಲಿ ಮಹಿಳಾ ತಂಡದ ಸ್ಪೋಟಕ ಬ್ಯಾಟ್ಸ್ ವುಮೆನ್ ಸ್ಮೃತಿ ಮಂದಾನ ಅವರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ.

ಮಂದಾನ ಅವರು 51 ಪಂದ್ಯಗಳಲ್ಲಿ 2000 ರನ್ ಗಡಿ ದಾಟಿದ್ದಾರೆ. ಇದಕ್ಕೆ ಮೊದಲು ಗಂಗೂಳಿ, 52, ಕೊಹ್ಲಿ 53 ಮತ್ತು ನವಜ್ಯೋತ್ ಸಿಂಗ್ ಸಿಧು ಅವರು 52 ಪಂದ್ಯಗಳಲ್ಲಿ ಎರಡು ಸಾವಿರ ರನ್ ಪೂರೈಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 74 ರನ್ ಬಾರಿಸಿದ ಮಂದಾನ ಈ ಸಾಧನೆ ಮಾಡಿದರು. ಭಾರತ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.