ಟೀಂ ಇಂಡಿಯಾ ಕೋಚ್ ಹುದ್ದೆ: ಆರು ಮಂದಿ ಅಂತಿಮ ಪಟ್ಟಿಗೆ

ಟೀಂ ಇಂಡಿಯಾ ಕೋಚ್ ಹುದ್ದೆ: ಆರು ಮಂದಿ ಅಂತಿಮ ಪಟ್ಟಿಗೆ

HSA   ¦    Aug 13, 2019 02:30:12 PM (IST)
ಟೀಂ ಇಂಡಿಯಾ ಕೋಚ್ ಹುದ್ದೆ: ಆರು ಮಂದಿ ಅಂತಿಮ ಪಟ್ಟಿಗೆ

ಮುಂಬಯಿ: ಟೀಂ ಇಂಡಿಯಾದ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರಿ ಸಹಿತ ಆರು ಮಂದಿಯ ಹೆಸರನ್ನು ಅಂತಿಮ ಪರಿಗಣನೆಗೆ ಕಳುಹಿಸಲಾಗಿದೆ.

ರವಿಶಾಸ್ತ್ರಿ ಅವರ ಹೊರತಾಗಿ ಮಾಜಿ ಕ್ರಿಕೆಟಿಗರಾದ ಲಾಲ್ ಚಂದ್ ರಾಜ್ ಪುತ್, ರಾಬಿನ್ ಸಿಂಗ್, ನ್ಯೂಜಿಲೆಂಡ್ ನ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಟಾಮ್ ಮೂಡಿ ಮತ್ತು ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಫಿಲ್ ಸಿಮೊನ್ಸ್ ಅವರು ಅಂತಿಮ ಆರು ಜನರ ಪಟ್ಟಿಯಲ್ಲಿದ್ದಾರೆ.

ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಮಹಿಳಾ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಅವರನ್ನು ಒಳಗೊಂಡಿರುವ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯು ಈ ಆರು ಮಂದಿಯ ಅಂತಿಮ ಪಟ್ಟಿ ತಯಾರಿಸಿದೆ.