ಐರ್ಲೆಂಡ್ ಮಣಿಸಿ ಸೇಡು ತೀರಿಸಿಕೊಂಡ ಭಾರತ

ಐರ್ಲೆಂಡ್ ಮಣಿಸಿ ಸೇಡು ತೀರಿಸಿಕೊಂಡ ಭಾರತ

HSA   ¦    Mar 10, 2018 05:50:07 PM (IST)
ಐರ್ಲೆಂಡ್ ಮಣಿಸಿ ಸೇಡು ತೀರಿಸಿಕೊಂಡ ಭಾರತ

ಇಪೊಹ್: ಅಜ್ಲಾನ್ ಷಾ ಹಾಕಿ ಟೂರ್ನಮೆಂಟ್ ನಲ್ಲಿ ಶನಿವಾರ ಐರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿಕೊಂಡ ಭಾರತ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಸರ್ದಾರ್ ಸಿಂಗ್ ಬಳಗವು ಐರ್ಲೆಂಡ್ ವಿರುದ್ಧ ಎರಡನೇ ಸಲ ಮುಖಾಮುಖಿಯಾಗಿದ್ದು, 4-1ರ ಅಂತರದ ಭರ್ಜರಿ ಗೆಲುವು ದಾಖಲಿಸಿಕೊಂಡಿತು. ಲೀಗ್ ಹಂತದಲ್ಲಿ ಐರ್ಲೆಂಡ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಲೀಗ್ ಹಂತದಲ್ಲಿ ಭಾರತವು 2-3ರಿಂದ ಐರ್ಲೆಂಡ್ ವಿರುದ್ಧ ಸೋಲುಂಡಿತ್ತು. ಈ ಸೋಲಿನಿಂದಾಗಿ ಭಾರತದ ಫೈನಲ್ ಕನಸು ಕೂಡ ಭಗ್ನಗೊಂಡಿತ್ತು.

ವರುಣ್ ಕುಮಾರ್ 2, ಶಿಲಾನಂದ್ ಲಾಕ್ರಾ ಮತ್ತು ಗುರ್ಜಾಂಟ್ ತಲಾ ಒಂದೊಂದು ಗೋಲು ಬಾರಿಸಿದರು. ಐರ್ಲೆಂಡ್ ಪರವಾಗಿ ಜೂಲಿಯನ್ ಡೇಲ್ ಏಕೈಕ ಗೋಲು ಬಾರಿಸಿದರು.